‘ಮಕುಮತ’ ಲೇಖಕ ಬಿ.ಆರ್. ಸುಬ್ರಹ್ಮಣ್ಯ ಅವರ ಕತಾಸಂಕಲನ. ಇದರಲ್ಲಿ ಹತ್ತು ವಿಭಿನ್ನ ಕಥೆಗಳು ಸಂಕಲನಗೊಂಡಿವೆ. ಈ ಕೃತಿಯ ಕುರಿತು ಬರೆಯುತ್ತಾ ಸ್ವತಃ ಲೇಖಕರು ಇವು ನಾನು ಕಂಡ ಘಟನೆಗಳು, ಉಂಡ ಅನುಭವಗಳು, ಸಮಾಜದ ಜ್ವಲಂತ ಸಮಸ್ಯೆಗಳು, ಯಡವಟ್ಟುಗಳು, ಮನುಷ್ಯರೊಳಗಣ ಅಹಂಕಾರ, ದೌರ್ಬಲ್ಯ, ದುಡುಕುತನ, ಅಜ್ಞಾನ, ನೋವು, ನಲಿವು ಇವೆಲ್ಲವೂ ನನ್ನ ಕಥೆಗಳಿಗೆ ಕಚ್ಚಾವಸ್ತುಗಳಾದವು ಎನ್ನುತ್ತಾರೆ. ಇಲ್ಲಿನ ಹತ್ತೂ ಕತೆಗಳು ಹತ್ತು ಬಗೆಯ ಅನುಭವಗಳನ್ನು ನೀಡುವ ಕತೆಗಳಾಗಿದ್ದು, ಓದುಗರ ಮನದಲ್ಲಿ ಉಳಿದುಕೊಳ್ಳುತ್ತವೆ.
ಕನ್ನಡ ಪುಸ್ತಕಗಳ ಅಪ್ಪಟ ಓದುಗರಾದ ಬಿ.ಆರ್. ಸುಬ್ರಹ್ಮಣ್ಯ ಕನ್ನಡ ಸಾಹಿತ್ಯ ಪ್ರೇಮಿ. ಕಳೆದ ಹತ್ತು ವರ್ಷಗಳಿಂದ ಓದಿನ ಜೊತೆಜೊತೆಗೆ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬರೆದ ಕಥೆ, ಕವಿತೆ ಮತ್ತು ಬಿಡಿ ಬರಹಗಳು ಪ್ರಜಾವಾಣಿ, ವಿಜಯವಾಣಿ, ಹಾಯ್ ಬೆಂಗಳೂರು ಸೇರಿದಂತೆ ರಾಜ್ಯ ಮಟ್ಟದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಚೊಚ್ಚಲ ಕೃತಿ “ಜೀವನವೇನೋ ದೊಡ್ಡದು...” 2015ರಲ್ಲಿ ಬಿಡುಗಡೆಯಾಗಿದೆ (ಪ್ರಕಾಶಕರು: ಸಿವಿಜಿ ಇಂಡಿಯಾ, ಬೆಂಗಳೂರು). ಇದು ಚಿಂತನಾತ್ಮಕ ಲೇಖನಗಳ ಸಂಗ್ರಹ. ಹಲವು ಉತ್ತಮ ಸಮಕಾಲೀನ ಮಾಹಿತಿಗಳು, ಜಿಜ್ಞಾಸೆ, ವಿಮರ್ಶೆ, ವಿಶ್ಲೇಷಣೆ, ಜನಗಳ ತಪ್ಪು ಗ್ರಹಿಕೆಗಳು ಮತ್ತು ಅವುಗಳ ಸರಿಪಡಿಸುವಿಕೆ, ...
READ MORE