‘ಇಲ್ಲಿಂದ ಅಲ್ಲಿಂದ’ ಪಾಲಹಳ್ಳಿ ವಿಶ್ವನಾಥ್ ಅವರ ಕಥೆಗಳು ಮತ್ತು ಲೇಖನಗಳಾಗಿವೆ. ಇದಕ್ಕೆ ಬಿ. ಜನಾರ್ದನ ಭಟ್ ಅವರ ಮುನ್ನುಡಿ ಬರಹವಿದೆ; ‘ಇಲ್ಲಿಂದ ಅಲ್ಲಿಂದ’ ಎಂಬ ಈ ಕೃತಿಯು ಓದುಗರ ಅನುಭವವನ್ನು ಹಲವು ಬಗೆಗಳಿಂದ ಸಮೃದ್ಧಗೊಳಿಸುತ್ತದೆ. ಪಾಲಹಳ್ಳಿ ವಿಶ್ವನಾಥ್ ಅವರು ಸಣ್ಣಕತೆ, ಲಲಿತ ಪ್ರಬಂಧ, ಅನುಭವ ಕಥನಗಳನ್ನೂ ಬರೆದಿದ್ದಾರೆ. ಈ ಸಂಕಲನದಲ್ಲಿ ಪಾಲಹಳ್ಳಿಯವರ ಸೃಜನಶೀಲ ಬರವಣಿಗೆಯ ಈ ಎಲ್ಲ ಮುಖಗಳನ್ನೂ ಕಾಣಬಹುದು ಎನ್ನುವುದೇ ಈ ಕೃತಿಯ ವೈಶಿಷ್ಟ್ಯ. ಈ ಕೃತಿಯ ವಾಚನೀಯತೆ ಉನ್ನತಮಟ್ಟದ್ದು, ಜತೆಗೆ ಇದರ ಹಿಂದೆ ಕೆಲಸ ಮಾಡಿರುವ ಮನಸ್ಸು ಕೂಡ ಸದಭಿರುಚಿಯ ಸಾಹಿತ್ಯಕ್ಕೆ ಇದೊಂದು ಮಾದರಿಯಾಗಿ ನಿಲ್ಲುವ ಕೃತಿ ಎಂದು ಹೇಳಬಹುದು.
ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...
READ MORE