ಲೇಖಕ ಅಲಕ ತೀರ್ಥಹಳ್ಳಿ ಅವರ ಕಥಾ ಸಂಕಲನ-ನವಿಲೆಸರ. ಈ ಕಥೆಗಳ ಸಹವಾಸವೇ ಸಾಕು ಎಂಬ ಕಥಾ ಸಂಕಲನದ ಮೂಲಕ ಸಾಹಿತ್ಯಲೋಕದಲ್ಲಿ ಪರಿಚಿತರಾದ ಲೇಖಕರು, ಕಥನಗಾರಿಕೆಯ ಸೂಕ್ಷ್ಮತೆಯನ್ನು ಕರಗತ ಮಾಡಿಕೊಂಡ ಕಥೆಗಾರರು. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ವಿಶ್ಲೇಷಣೆ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಈ ಕತೆಗಳ ಸಹವಾಸವೇ ಸಾಕು- ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದ ಅಲಕ ತೀರ್ಥಹಳ್ಳಿ ಅವರು ಸಾಗರ (ಶಿವಮೊಗ್ಗ ಜಿಲ್ಲೆ) ಸಮೀಪದ ಹೂಗೊಪ್ಪಲಿನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿರುವ ಅಲಕ ಅವರು, ಛಂದ ಪುಸ್ತಕ ಪ್ರಶಸ್ತಿ(2005) ಕಥಾರಂಗಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 'ಅಲಕ ತೀರ್ಥಹಳ್ಳಿ' ಎಂಬ ಹೆಸರಿನಲ್ಲಿ ಲಕ್ಷ್ಮೀನಾರಾಯಣ ಬರೆದಿದ್ದಾರೆ. ಆ ಕಥೆಗಳಲ್ಲದೆ ಕವನ, ಹನಿಗವನ ಮತ್ತು ನಾಟಕಗಳನ್ನೂ ಬರೆದಿರುವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಈ ಕಥೆಗಳ ಸಹವಾಸವೇ ಸಾಕು, ನವಿಲೆಸರ (ಕಥಾ ಸಂಕಲನಗಳು), ಶಾಲಾ ಮಕ್ಕಳ ...
READ MORE