ಅಂಧಕಾರದಲ್ಲಿ ಸೂರ್ಯ

Author : ಯಂಡಮೂರಿ ವೀರೇಂದ್ರನಾಥ್

₹ 160.00




Published by: ಸುಧಾ ಎಂಟರ್ ಪ್ರೈಸಸ್

Synopsys

ನಿಗೂಢವಾಗಿಯೇ ಉಳಿದಿರುವ ಅನ್ಯಗ್ರಹಜೀವಿಗಳು ನಿಜಕ್ಕೂ ಇದ್ದಾರಾ? ಇದ್ದರೆ ಅವರಿಂದ ಭೂಮಿಗೆ ಯಾವ ರೀತಿಯ ತೊಂದರೆಗಳಾಗಬಹುದು? ಅಥವಾ ಅವರಿಂದ ಸಹಾಯವೇ ದೊರಕಬಹುದಾ? ಅವರ ವಿಜ್ಞಾನ ಮತ್ತು ತಂತ್ರಜ್ಞಾನ ನಮಗಿಂತ ಎಷ್ಟು ಮುಂದುವರೆದಿದೆ? ಇಂತಹ Scientific ಥ್ರಿಲ್ಲರ್ ಕಾದಂಬರಿಯೇ ಅಂಧಕಾರದಲ್ಲಿ ಸೂರ್ಯ.

ಯಂಡಮೂರಿಯವರ ಕಾದಂಬರಿಗಳಲ್ಲಿ ಪ್ರೀತಿ, ಪ್ರೇಮ ಮಾನವ ಸಂಬಂಧಗಳ ಬಗ್ಗೆ ಅದ್ಭುತವಾದ ವ್ಯಾಖ್ಯಾನಗಳನ್ನು ನೋಡಿದ್ದೇವೆ, ಹಾಗೇ ಇಂತಹ ವೈಜ್ಞಾನಿಕ ಕಥಾವಸ್ತುಗಳನ್ನಿಟ್ಟುಕೊಂಡ ಕಾದಂಬರಿಗಳೂ ಅದ್ಭುತವಾಗಿವೆ. ಯಾವ ಬಗೆಯ ಕಥಾವಸ್ತುಗಳೇ ಇರಲಿ ಸುಂದರ ನಿರೂಪಣೆಯೊಂದಿಗೆ ಓದುಗರಿಗೆ ಪ್ರಿಯರಾಗುತ್ತಾರೆ. ಕಾದಂಬರಿಯ ಅಂತ್ಯದಲ್ಲಿ ತಮ್ಮ ಶಕ್ತಿಗೆ ಅಲ್ಪಾ ಗ್ರಹವಾಸಿಗಳು ಸೂರ್ಯನನ್ನೆ ಆರಿಸಿಕೊಳ್ಳಲು ಕೊಡುವ ಕಾರಣ, ನಿಜಕ್ಕೂ ಬೆಚ್ಚಿಬೀಳಿಸುವಂತದ್ದು. ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಾ, ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಸಂಕುಲಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವ ಮಾನವ ಕುಲದ ವರ್ತನಗಳ ಬಗ್ಗೆ ತಲೆತಗ್ಗಿಸುವಂತೆ, ಒಮ್ಮೆ ಯೋಚಿಸುವಂತೆ ಮಾಡುತ್ತದೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books