ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು

Author : ನಟರಾಜ ಹುಳಿಯಾರ್

Pages 96

₹ 100.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ಹೊಸ ತಲೆಮಾರಿನ ಗಂಡು ಹೆಣ್ಣಿನ ನಡುವಿನ ಅಂರ್ತಸಂಬಂಧವನ್ನು ಹೊಸ ಸಂವೇದನೆಗೆ ಒಳಪಡಿಸಿದ ಕತೆಗಳಿದ್ದು ಓದುಗರನ್ನು ಗಾಢವಾಗಿ ಅಪ್ಪಿಕೊಳ್ಳುತ್ತವೆ. ಪ್ರೀತಿ, ಕಾಮ, ಸಮಕಾಲೀನ ಸೂಕ್ಷ್ಮಗಳಿಗೆ ಸ್ಪಂದಿಸುವ ಕತೆಗಳನ್ನು ಕಟ್ಟುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

'ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು' ಕಥಾ ಸಂಕಲನದಲ್ಲಿ ನಟರಾಜ್ ಹುಳಿಯಾರ್, ಸಮಕಾಲೀನ ಬದುಕಿಗೆ ಸೂಕ್ಷ್ಮವಾಗಿ ಸ್ಪಂದಿಸಿರುವುದರ ಜೊತೆಗೆ ಕಥೆಕಥನಗಳ ಬಗ್ಗೆಯೂ ಗಾಢವಾಗಿ ಚಿಂತಿಸಿದ್ದಾರೆ. ಇಲ್ಲಿಯ ಕೆಲವು 'ಕಥೆ'ಗಳು ಫಿಕ್ಷನ್‌ನ ಪರಿಧಿಯನ್ನು ದಾಟಿ 'ಮೆಟಾಫಿಕ್ಷನ್' ಕಡೆಗೆ ಚಲಿಸುವ ವಿದ್ಯಮಾನವನ್ನು ಕಾಣುತ್ತೇವೆ. ನಟರಾಜ್ ಅವರ ಎರಡು ಮುಖ್ಯ ಆಸಕ್ತಿಗಳಾದ ಕಥೆ ಮತ್ತು ವಿಮರ್ಶೆ ಅವರ ಕೆಲವು ಬರಹಗಳಲ್ಲಿ ಪರಸ್ಪರ ಎದುರಾಗಿ ಈ ಸೃಜನಶೀಲ ಅನುಸಂಧಾನದಲ್ಲಿ ಎರಡೂ ತುಸು ‘ಹಿಗ್ಗು’ವ ಪ್ರಕ್ರಿಯೆಗೆ ಸಾಕ್ಷಿಯಾಗುತ್ತವೆ ಎಂದು ಕೃತಿಗೆ ಬರೆದ ಬೆನ್ನುಡಿಯಲ್ಲಿ ವಿಮರ್ಶಕ ಟಿ.ಪಿ. ಅಶೋಕ ಪ್ರಶಂಸಿಸಿದ್ದಾರೆ.

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Awards & Recognitions

Related Books