ಗೋರಿ ಮತ್ತು ಧರ್ಮ

Author : ಸೋಮಲಿಂಗ ಬೇಡರ ಆಳೂರ

₹ 100.00




Published by: ಪಲ್ಲವಿ ಪ್ರಕಾಶನ
Address: ಸೋಮಲಿಂಗ ಬೇಡರ ಪಲ್ಲವಿ ಪ್ರಕಾಶನ ನಂದಿ ನಗರ ಬೀಳಗಿ - ೫೮೭೧೧೬ ಜಿಲ್ಲೆ - ಬಾಗಲಕೋಟೆ

Synopsys

`ಗೋರಿ ಮತ್ತು ಧರ್ಮ' ಸೋಮಲಿಂಗ ಬೇಡರ ಆಳೂರ ಅವರ ಸಮಕಾಲಿನ ಸಂದರ್ಭದಲ್ಲಿ ಒಂದು ವಿಶಿಷ್ಟ ಅನುಭ ಕಟ್ಟಿಕೊವ ಕೃತಿಯಾಗಿದೆ. ಜಾತವಂತರಿಗೆ, ಧರ್ಮವಂತರಿಗೆ ಹೊಸ ಸಂದೇಶ ನೀಡುತ್ತದೆ. ಮನುಷ್ಯ ಮನುಷ್ಯರ ನಡುವಿನ ಬಿರುಕುಗಳಿಗೆ ಮುಲಾಮು ಹಚ್ಚಿ ಒಂದಾಗಿಸಲು ಪ್ರಯತ್ನಿಸುತ್ತದೆ. ಡಾ. ಸತ್ಯಾನಂದ ಪಾತ್ರೋಟ ಅವರು ಹೀಗೆ ಹೇಳಿದ್ದಾರೆ; ‘ಜೀವ ಅಜೀವಗಳ ನಡುವೆ ಬದುಕು ಕಟ್ಟಿಕೊಳ್ಳುವ ನೋವು, ಸಂಕಟ, ಸಂಭ್ರಮಗಳಿಗೆ ತೆರೆ ಬಿದ್ದಾಗ ಗೋರಿ ಸೇರುವ ಈ ಮಣ್ಣಿಂದ ಬಂದು ಮಣ್ಣು ಸೇರುವ ದೇಹಕ್ಕೆ ನೆಲೆಯಾದ ' ಗೋರಿ ಮತ್ತು ಧರ್ಮ' ಕೃತಿ ಹಲವು ಅರ್ಥಗಳ ಮೊತ್ತವಾಗಿದೆ,’ ಎಂದಿದ್ದಾರೆ. ಡಾ. ಪ್ರಕಾಶ ಖಾಡೆ ಅವರು, ‘ಒಂದು ಕಾಲದಲ್ಲಿ ನಾವೇ ಪೂಜಿಸಿ, ಆರಾಧಿಸಿ ನಮ್ಮ ಕಲ್ಯಾಣಕ್ಕಾಗಿ ರೂಪಿಸಿಕೊಂಡ ಮಾನವ ಧರ್ಮವಿಂದು ಮೈತುಂಬಾ ಭಿನ್ನತೆಗಳನ್ನು ತುಂಬಿಕೊಂಡ ಬಿಕ್ಕಟ್ಟುಗಳ ಮಧ್ಯೆ ನರಳುತ್ತಿರುವ ರೂಪಕವೇ 'ಗೋರಿ ಮತ್ತು ಧರ್ಮ' ಇದು ಆತ್ಮವನ್ನು ಕಲಕುವ ಅಪರೂಪದ ಕವನಗಳ ಸಂಕಲನ,’ ಎಂದು ತಿಳಿಸಿದ್ದಾರೆ. 

About the Author

ಸೋಮಲಿಂಗ ಬೇಡರ ಆಳೂರ
(08 June 1969)

ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006),  ಹಕ್ಕಿ ಗೂಡು ( ಮಕ್ಕಳ ‌ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ ‌ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ‌ ಸಮೀರವಾಡಿ ದತ್ತಿ, ಮಕ್ಕಳ ‌ ‌ ...

READ MORE

Related Books