ಕಂಟೋನ್ಮೆಂಟ್ ಕಥೆಗಳು

Author : ಬೈಂದೂರು ಚಂದ್ರಶೇಖರ ನಾವಡ

Pages 132

₹ 150.00




Year of Publication: 2024
Published by: Nidasale P Vijay
Address: Jagruthi Printers #56/1-6 Narasimhaiah Garden, Kottigepalya, Magadi Main Road, Bangalore-560091
Phone: 9740066842

Synopsys

`ಕಂಟೋನ್ಮೆಂಟ್ ಕಥೆಗಳು’ ಬೈಂದೂರು ಚಂದ್ರಶೇಖರ ನಾವಡ ಅವರ ಕಥಾಸಂಕಲನವಾಗಿದೆ. ಇಲ್ಲಿ ದೊಡ್ಡ ಗೋಡೆಯ ನಡುವೆ ಬದುಕುವ ಯೋಧರ ಮಾನಸಿಕ ತಳಮಳ, ಸೈದ್ಧಾಂತಿಕ ಸಂಘರ್ಷ, ಭಾವನೆಗಳ ತಾಕಲಾಟದ ಸಚಿತ್ರ ವಿವರಣೆಯನ್ನು ಕತೆಗಾರರು ವಿವರಿಸಿದ್ದಾರೆ. ಒಟ್ಟಾಗಿ ಈ ಸಂಕಲನದಲ್ಲಿ 15 ಸಣ್ಣಕತೆಗಳಿದ್ದು, ಯುವಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆ.   

About the Author

ಬೈಂದೂರು ಚಂದ್ರಶೇಖರ ನಾವಡ

ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ದಿ. ರಾಮನಾವಡ ಮತ್ತು ದಿ. ಗೋದಾವರಿ ಅವರ ಪುತ್ರನಾಗಿ 10-09-1965ರಲ್ಲಿ ಜನಿಸಿದರು .  1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯ 22 ವರ್ಷದ ಸೇವಾವಧಿಯಲ್ಲಿ ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲೂ, ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಪಚಮಡಿ (ಮಧ್ಯಪ್ರದೇಶ.) ಮತ್ತು ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‍ನಲ್ಲೂ ಸೇವೆ ಮಾಡಿ    ಜಮ್ಮು ಕಾಶ್ಮೀರದಲ್ಲಿ `ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ `ಅಪರೇಶನ್ ವಿಜಯ್’ ದಲ್ಲಿ ಸಕ್ರಿಯವಾಗಿ ಕರ್ತವ್ಯ ...

READ MORE

Excerpt / E-Books

ಸೈನಿಕರೂ ಸಹ ನಾಗರಿಕ ಸಮಾಜದಲ್ಲೇ ಹುಟ್ಟಿ ಬೆಳೆದವರು. ಅವರೂ ಸಮಾಜದ ಭಾಗವೇ ಆಗಿರುವುದರಿಂದ ಅಲ್ಲಿಯೂ ಸಹ ನಾಗರಿಕ ಸಮಾಜದಲ್ಲಿ ಕಾಣ ಬಹುದಾದ ವ್ಯಕ್ತಿಗಳ ನಡುವೆ ಸಂಘರ್ಷ ಕಾಣಬಹುದು. ಆದರೆ ಸೇನೆಯ ನ್ಯಾಯ ತಂತ್ರ ಮಜಬೂತಾಗಿದೆ......

Related Books