ಸಮಕಾಲೀನ ಸಾಹಿತ್ಯವನ್ನು ಮುಂಚೂಣಿಯಲ್ಲಿಟ್ಟು ವಾಸ್ತವಾಂಶದೊಂದಿಗೆ ತಮ್ಮ ಬರವಣಿಗೆಯನ್ನು ಶುರು ಮಾಡಿದವರು ಎಚ್ಚೆಸ್ವಿ. ಚಂಬಣ್ಣನ ಬೊಂಬೆ ವ್ಯಾಪಾರ, ಮುಟ್ಟಾರಿಯ ಮತಾಂತರ, ಇಸಮಲ್ಲಣ್ಣ ಗಿಡ ಬೆಳೆಸಿದ್ದು, ವಿರಾಟಪರ್ವ ಮೊದಲಾದವು ಅವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನಗಳು.
ಮಾನವ ಜಗತ್ತಿನ ಸಂಕೀರ್ಣ ಸಂಬಂಧಗಳನ್ನು ಅರಿಯಲು ಯತ್ನಿಸುವ ಅವರ ಕಥಾ ಪಾತ್ರಗಳು ತಮ್ಮ ಮುಕ್ತ ಸಂವೇದನೆ ಮತ್ತು ಧನಾತ್ಮಕ ಚಿಂತನೆಗಳಿಂದ ಓದುಗರನ್ನು ಎಚ್ಚರಿಸಿ, ಬದುಕಿನ ಮೇಲೂ ಪ್ರಭಾವಿಸುವಷ್ಟು ಶಕ್ತಿಶಾಲಿಯಾದ ಕಥೆಗಳು ಇಲ್ಲಿವೆ. ಎಚ್ಚೆಸ್ವಿ ಅವರ ಅಷ್ಟೂ ಕಥೆಗಳನ್ನು ಸಂಕಲಿಸಿ ಈ ಕೃತಿಯಲ್ಲಿ ನೀಡಲಾಗಿದೆ.
ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...
READ MORE