‘ಬಿಡುಗಡೆ’ ಕೃತಿಯು ಎ.ಎನ್. ಪ್ರಸನ್ನ ಅವರ ಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಿ.ಎನ್. ರಾಮಚಂದ್ರನ್ ಅವರು, `ಎ.ಎನ್. ಪ್ರಸನ್ನ ಅವರ ಈವರೆಗಿನ ಕತೆಗಳು ಬಹುಮಟ್ಟಿಗೆ ವ್ಯಕ್ತಿ ಸಮಾಜಗಳ ನಡುವೆ ಇರುವ ಸಂಬಂಧಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟರೆ, ಈ ಸಂಕಲನದ ಕತೆಗಳು ಸಂಪೂರ್ಣವಾಗಿ ವ್ಯಕ್ತಿಗಳ ಭಾವನೆಗಳು ಹಾಗೂ ಮಾನಸಿಕ ತುಮುಲಗಳಿಗೆ ಒತ್ತುಕೊಡುತ್ತಾ ವ್ಯಕ್ತಿಯ ಕೌಟುಂಬಿಕ ಸಂಬಂಧಗಳನ್ನು ಆಳವಾಗಿ ವಿಶ್ಲೇಷಿಸುತ್ತವೆ. ಈ ಸಂಕಲನದ ಕತೆಗಳನ್ನು, ಸ್ಥೂಲವಾಗಿ, ಎರಡು ವರ್ಗಗಳಲ್ಲಿ ನೋಡಬಹುದು; ವರ್ಷ ಇಡೀ ವಿಶ್ವವನ್ನು ಆಕ್ರಮಿಸಿರುವ ಕರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬರೆದಿರುವ ಕತೆಗಳು ನಾಲ್ಕು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಿನ್ನೆಲೆಯಲ್ಲಿ ಬರೆದಿರುವ ಆರು ಕತೆಗಳು ಇಲ್ಲಿವೆ. ಮಾನವೀಯತೆ ಕರೋನಾ ಕಾಲದಲ್ಲಿಯೂ ಗೆಲ್ಲುತ್ತದೆ ಎಂಬುದನ್ನು ಮನೋಜ್ಞವಾಗಿ ಈ ಕತೆಗಳು ದಾಖಲಿಸುತ್ತವೆ. ಎರಡನೇಯ ವರ್ಗದಲ್ಲಿ ಬರುವ ಆರು ಕತೆಗಳಲ್ಲಿ ವ್ಯಕ್ತಿಯ ಭಾವಕೋಶದ ಆಳವಾದ ವಿಶ್ಲೇಷಣೆ ಮುಖ್ಯವಾಗುತ್ತದೆ. ಎಲ್ಲಾ ಆರು ಕತೆಗಳಲ್ಲಿ ವ್ಯಕ್ತಿಯ ಭಾವಕೋಶದ ಆಳವಾದ ವಿಶ್ಲೇಷಣೆ ಮುಖ್ಯವಾಗುತ್ತದೆ. ಎಲ್ಲಾ ಕತೆಗಳೂ ಕಥನದ ನೆಲೆಯಲ್ಲಿ ಸಫಲವಾದರೂ, ’ಪಾರ್ಕ್’ ಮತ್ತು ’ಹುಡುಕಾಟ’ ತಮ್ಮ ವಿಶಿಷ್ಟ ವಸ್ತುವಿನ ಕಾರಣದಿಂದ ಎದ್ದು ಕಾಣುತ್ತದೆ' ಎಂದಿದ್ದಾರೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE