ಲೇಖಕ ಗಂಗಾಧರ ಬೆಳ್ಳಾರೆ ಅವರ ಕೌನ್ಸೆಲಿಂಗ್ ಕಥೆಗಳು ‘ತಬ್ಬಲಿಯು ನೀನಲ್ಲ ಮಗಳೆ’. ಈ ಸಂಕಲನದಲ್ಲಿ ಒಟ್ಟು 9 ಕೌನ್ಸೆಲಿಂಗ್ ಕಥೆಗಳಿವೆ.ತನ್ನ ಕೆಲಸಕ್ಕೆ ವಿಪರೀತ ಅರ್ಥ ಕಟ್ಟುವವರೂ, ಗೇಲಿ ಮಾಡುವವರೂ ಇರುವ ಹೊತ್ತಿಗೇ, ಕೌನ್ಸೆಲ್ಲಿಂಗ್ ನ ಅಗತ್ಯ ವನ್ನರಿತು ಅದರತ್ತ ಪ್ರಚೋದಿಸುವ ಸಹೃದಯಿಗಳೂ ಸಿಗುತ್ತಿದ್ದಾರೆ. ಡಿಗ್ರಿಗಳಿಂದ ಬಿರುದಾಂಕಿತರಾದವರ ಔಷಧಿ ಪಟ್ಟಿ ಹಾಗೂ ಫೀಸನ್ನು ಪರಿಗಣಿಸಿ ಪರಿಣಾಮಕಾರಿ ಚಿಕಿತ್ಸೆ ಎಂದು ನಂಬುವ ಜನರಿರುವ ಕಾಲದಲ್ಲಿ ಬರೀ "ಮಾತಿನ ಚಿಕಿತ್ಸೆ" ಯ ಅರ್ಥಕ್ಕೆ ಮಹತ್ವ ತುಂಬುವವರೂ ಇದ್ದಾರೆ ಎಂದು ಹೇಳಲು ಲೇಖಕರು ಮರೆಯುವುದಿಲ್ಲ.
ಆಪ್ತಸಲಹೆಗಾರ, ಮನೋವಿಜ್ಞಾನಿ ಹಾಗೂ ಸಾಹಿತಿಯಾಗಿರುವ ಗಂಗಾಧರ ಬೆಳ್ಳಾರೆ ಹುಟ್ಟಿದ್ದು 1965ರಲ್ಲಿ. ಮನೋವಿಜ್ಞಾನ ವ್ಯಾಸಂಗದೊಂದಿಗೆ ಪದವಿ ಹಾಗೂ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವೀಧರರು. ಯಕ್ಷಗಾನ ಕಲಾವಿದ, ಮೃದಂಗವಾದಕ, ಮೇಕಪ್ ಕಲಾವಿದ, ನೃತ್ಯರೂಪಕ ಹಾಗೂ ನಾಟಕಗಳ ಕಲಾವಿದರಾಗಿಯೂ ಪ್ರಸಿದ್ಧರು. ಸೈಕೋಥೆರಪಿ, ಗ್ರೂಪ್ ಕೌನ್ಸೆಲಿಂಗ್, ಕ್ಲಿನಿಕಲ್ ಹಿಪ್ನೋಸಿಸ್ ಚಿಕಿತ್ಸಕರು. ‘ಚಿಲಿಪಿಲಿ, ಗಾಜಿನ ತೇರು, ತಬ್ಬಲಿಯು ನೀನಲ್ಲ ಮಗಳೆ, ಕಲಿಕೆ ಹಾದಿಯ ಮಗು, ಕನಸು ಹೆಕ್ಕುವ ಮನಸು, ಇವರು ನೀವಲ್ಲ, ತಪ್ಪು ತಿದ್ದುವ ತಪ್ಪು, ಮೌನಗರ್ಭ’ ಅವರ ಕೃತಿಗಳು. ‘ನೆನಪಿಗೊಂದು ಕೌನ್ಸೆಲಿಂಗ್’ ಕೃತಿಗೆ ‘ಅಕಲಂಕ ಪುಸ್ತಕ ಪುರಸ್ಕಾರ ಪ್ರಶಸ್ತಿ’ ದೊರೆತಿದೆ. ...
READ MORE