‘ಶಕ್ತಿವೈದ್ಯ’ ತಿ. ಜಾನಕಿರಾಮನ್ ಅವರ ಮೂಲ ಕತಾ ಸಂಕಲನವಾಗಿದೆ. ಶೇಷನಾರಾಯಣ ಅವರು ಅನುವಾದಿಸಿದ್ದಾರೆ. ಈ ಕೃತಿಯು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದು, ಗಂಗಾಸ್ನಾನ, ತೀರ್ಮಾನ, ಮುಳ್ಳಿನ ಕಿರೀಟ, ಅಕ್ಷರಾಭ್ಯಾಸ, ನಾಯಕರ ಸೇವೆ, ಗೋದಾವರಿ ತಪ್ಪಲೆ, ವೆಂಕಟು ಸಾರ್ ಯಾಕೆ ಓಡಿದರು?, ಶಕ್ತಿ ವೈದ್ಯ, ಮನೆ, ಒಂದು ಚಿಕ್ಕ ವಾಗ್ವಾದ, ಸಂಗೀತಾಭ್ಯಾಸ, ಆಟದ ಬೊಂಬೆಯಂತಹ ಅಧ್ಯಾಯಗಳನ್ನು ಇಲ್ಲಿ ಕಾಣಬಹುದು.
ಪ್ರಸಿದ್ಧ ಕತೆಗಾರ, ಬರಹಗಾರರಾದ ಶೇಷನಾರಾಯಣರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. ತಿರುಪತಿ ತಿಮ್ಮಪ್ಪನ ಫೋಟೋ ಮಾರಾಟ, ಅಷ್ಟೇಕೆ ಗಾರೆ ಕೆಲಸ, ರೈಲುಬಸ್ಸು ನಿಲ್ದಾಣಗಳಲ್ಲಿ ಹೊರೆಹೊತ್ತ ಕೂಲಿಯಾಗಿ, ಇವರಿಗೇ ತಿಳಿಯದೆ ಅದೆಷ್ಟು ಸಾಹಿತಿಗಳ ಹೊರೆ ಹೊತ್ತಿದ್ದಾರೋ ? ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿ ಹೀಗೆ ಒಂದೇ, ಎರಡೇ . ಭಾರತವೆಲ್ಲಾ ಸುತ್ತಿ ಗಂಗೆ, ನರ್ಮದೆ, ...
READ MORE