‘ಬಣ್ಣದ ಜಿಂಕೆ’ ಕೃತಿಯು ಕಂನಾಡಿಗಾ ನಾರಾಯಣ ಕಥಾಸಂಕಲನವಾಗಿದೆ. ಈ ಕೃತಿಯು ಹದಿನೈದು ಕತೆಗಳಿಂ ಕೂಡಿದ್ದು, ಇಲ್ಲಿನ ಕತೆಗಳು ಮನುಷ್ಯಲೋಕದ ವ್ಯಾಪಾರಗಳಿಗೆ ಸಂಬಂಧಿಸಿದಷ್ಟೇ ಪ್ರಾಣಿಲೋಕಕ್ಕೂ ಸೇರಿರುವುದರಿಂದ ಇದೊಂದು ಕುತೂಹಲಕರ, ಸ್ವಾರಸ್ಯಕರ ಮಿಶ್ರಣದಂತೆ ಕಾಣುತ್ತದೆ. ಇಲ್ಲಿಯ ಪ್ರಾಣಿಕತೆಗಳೂ ಮನುಷ್ಯ ಬದುಕಿನೊಂದಿಗೆ ಹೆಣೆದುಕೊಂಡವುಗಳೇ ಆಗಿವೆ. ಸಾಹಿತ್ಯ ಮತ್ತು ಚಲನಚಿತ್ರಗಳಲ್ಲಿ ಮನುಷ್ಯ ಬದುಕಿನೊಂದಿಗೆ ಬೆರೆತುಹೋದ ಪ್ರಾಣಿಕತೆಗಳು ಹೇರಳವಾಗಿ ದೊರೆಯುತ್ತವೆೆ. ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ‘ಪಂಚತಂತ್ರ ಕತೆಗಳು’. ಇಲ್ಲಿ ಮನುಷ್ಯ ಸ್ವಭಾವಗಳನ್ನೇ ಪ್ರಾಣಿಗಳಿಗೆ ಆರೋಪಿಸಲಾಗಿದ್ದು, ಹೊರನೋಟಕ್ಕೆ ನೀತಿಬೋಧಕ, ಉಪದೇಶಾತ್ಮಕ ಅನಿಸಿದರೂ ಅಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಯನ್ನು ಸಾಂಕೇತಿಕವಾಗಿ ಚರ್ಚಿಸುತ್ತಿದೆ ಎಂಬಂತೆಯೂ ಗ್ರಹಿಸಬಹುದು. ಇನ್ನು ಜನಪದ ಕತೆಗಳಲ್ಲಂತೂ ಅನೇಕ ಪ್ರಾಣಿಕತೆಗಳು ದೊರೆಯುತ್ತವೆ. ತೇಜಸ್ವಿಯವರ ಪ್ರಾಣಿ ಸಂಪರ್ಕದ ‘ಪರಿಸರ ಕತೆಗಳು’ ಇಂಥ ಹಲವು ಅನುಭವಗಳನ್ನು ಬಿಚ್ಚಿಡುತ್ತದೆ. ಹಾಗೂ ಕನ್ನಡದ ಹಿರಿಯ ಲೇಖಕರಾದ ಮಾಸ್ತಿಯವರು ‘ಕಾಕನ ಕೋಟೆ’ ಎಂಬ ನಾಟಕದಲ್ಲಿ ಆನೆಗಳೊಂದಿಗೆ ಒಡನಾಡಿದ ಕಾಡುಕುರುಬ ಸಮುದಾಯದ ಕತೆ ಇದನ್ನೇ ಹೇಳುತ್ತದೆ. ಕಾಡಿನೊಳಗಿರುವ ಸೋಲಿಗರು ಮತ್ತು ಆನೆಗಳೊಂದಿಗೆ ಮುಖಾಮುಖಿಯಾದ ಅನುಭವ ಕಥನವನ್ನು ರೇಣುಕಾರವರ ‘ಆನೆಗಳ ಕಾಡಲ್ಲಿ ಸೋಲಿಗರ ಬೀಡಿನಲ್ಲಿ’ ನಮ್ಮನ್ನು ಬೆಚ್ಚಿ ಬೀಳಿಸುವಂತಿದೆ. ಕಾಡಿನ ಜನಗಳ ಏಳ್ಗೆಗೆ ತಮ್ಮದೇ ಸಂಘಟನೆಯೊಂದಿಗೆ ಶ್ರಮಿಸುತ್ತಿರುವ `ಕ್ಷೀರಸಾಗರ’ ಅವರ ಅನುಭವ ಕಥನಗಳನ್ನು ಹೇಳುವ ಅವರ ಹಲವು ಕೃತಿಗಳು ಅಲ್ಲಿಯ ಕಾಡನ್ನು, ಪ್ರಾಣಿಗಳನ್ನು, ಜನರನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.
ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...
READ MORE