ಪ್ರಸನ್ನ ವಿ ಚೆಕ್ಕೆಮನೆ ಅವರ ‘ಕರಿಮಣಿ ಮಾಲೆ’ ಕಥಾ ಸಂಕಲನಾಗಿದೆ. ಲೇಖಕ ಶ್ರೀಕೃಷ್ಣ ಶರ್ಮ ಹಳೆಮನೆ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಕತೆಗಾಗಿ ಕತೆ ಬರೆಯದೆ, ಪ್ರತಿ ಕತೆಯಲ್ಲೂ ಒಂದೊಂದು ಸಂದೇಶಗಳನ್ನು ಕೊಟ್ಟುಕೊಂಡು, ಅದಕ್ಕೊಂದು ಒಳ್ಳೆಯ ಅಂತ್ಯ ಕೊಡುವುದೇ ಪ್ರಸನ್ನ ಬರೆಯುವ ಕತೆಗಳ ವಿಶೇಷತೆ. ತನ್ನ ಬದುಕಿನಲ್ಲಿ ಕಂಡ ನಿಜ ಅನುಭವಗಳು ಇಲ್ಲವೇ ಬೇರೆಯವರಿಂದ ತಿಳಿದುಕೊಮಡು ವಿಚಾರಗಳಿಗೊಂದು ರೂಪ, ಬಣ್ಣವನ್ನು ಕೊಟ್ಟು, ಜನರ ಮನಸ್ಸು ಗೆಲ್ಲುವಲ್ಲಿ ಪ್ರಸನ್ನ ಅವರ ಪಯತ್ನ ಯಶಸ್ವಿಯಾಗಿದೆ. ಹವ್ಯಕ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಇನ್ನೂ ಹೆಚ್ಚಿನದಾಗಿ ಸಿಗಲಿ ಎಂಬುದಾಗಿ ಶ್ರೀಕೃಷ್ಣ ಶರ್ಮ ಹಳೆಮನೆ ಮುನ್ನುಡಿಯಲ್ಲಿ ಹೇಳಿದ್ದಾರೆ.
ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...
READ MORE