’ರಾಂಗ್ ಶೋ ಮತ್ತು ಇತರ ಕಥೆಗಳು’ ಕನ್ನಡದ ಲೇಖಕ, ಕಥೆಗಾರ ನಾಗರಾಜ ಹವಾಲ್ದಾರ್ ಅವರ ಸಂಕಲನ. ಸಂಕಲನದ ಕಥೆಗಳು ಆಂತರ್‍ಯದಲ್ಲಿ ವ್ಯಂಗ್ಯ, ಕಟುವಾಸ್ತವ ಅಳವಡಿಸಿಕೊಂಡಿವೆ. ಓದುಗರಲ್ಲಿ ಉಲ್ಲಾಸದ ಜೊತೆಗೆ ಚಿಂತನೆಗೂ ಹಚ್ಚುವ ಗುಣ ಈ ಕತೆಗಳಿಗೆ ಇದೆ.
ಡಾ. ನಾಗರಾಜ ರಾವ್ ಹವಾಲ್ದಾರ್ ಅವರು ಮೂಲತಃ ಬಳ್ಹೊಳಾರಿ ಜಿಲ್ಲೆಯ ಹೊಸಪೇಟೆಯವರು. ಪಂಡಿತ್ ಮಾಧವ ಗುಡಿ ಹಾಗೂ ಪಂ. ಪಂಚಾಕ್ಷರಿ ಸ್ವಾಮಿ ಅವರ ಶಿಷ್ಯರು.ಖ್ಯಾತ ಶಾಸ್ತ್ರೀಯ ಹಿಂದೂಸ್ತಾನಿ ಗಾಯಕರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಸಂಗೀತ ರತ್ನ" ಪದವಿ ಅಧ್ಯಯನ ವೇಳೆ ಪಂಡಿತ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಸಂಗಮೇಶ್ವರ ಗುರಾವ, ಡಾ. ಬಿ.ಡಿ. ಪಾಠಕ್ ಅವರ ಗರಡಿಯಲ್ಲಿ ಬೆಳೆದವರು. ಕ.ವಿ.ವಿ.ಯಿಂದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಎಂ..ಎ, ಹಾಗೂ ‘ಕರ್ನಾಟಕದಲ್ಲಿ ಶಾಸ್ತ್ರೀಯ ಸಂಗೀತದ ಇತಿಹಾಸ’ ವಿಷಯದ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಖಯಾಲ್ ಮತ್ತು ಲಘು ಪ್ರಕಾರಗಳಲ್ಲಿ ಹಲವಾರು ಆಲ್ಬಮ್‌ಗಳನ್ನು ಸಿದ್ಧಪಡಿಸಿದ್ದಾರೆ. ಭಾರತೀಯ ...
READ MORE