‘ನೆರಳಿನಷ್ಟೇ ಕತ್ತಲು’ ಕ್ಷಿತಿಜ ಬೀದರ್ ಅವರ ಕಥಾಸಂಕಲನವಾಗಿದೆ. ಈ ಸಂಕಲನ 15 ಕಥೆಗಳನ್ನೊಳಗೊಂಡಿದ್ದು ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟವಾದಂಥವುಗಳು. ಮಧ್ಯಮ ನೆರಳಿನಷ್ಟೇ ಕತ್ತಲು ವರ್ಗದ ಜನರ ಬದುಕಿನ ಪರಿಯನ್ನು ಕಥೆಗಳ ಚೌಕಟ್ಟಿನೊಳಗೆ ತಂದು ಇತ್ತೀಚಿನ ಮಾತಿನ ಶೈಲಿಯೊಂದಿಗೆ ಹೇಳಲಾಗಿದೆ. ಸಾಮಾನ್ಯವಾಗಿ ಇಲ್ಲಿನ ಸಂಭಾಷಣೆ ಪ್ರತಿದಿನದ ಆವರ್ತನ ಸ್ವರೂಪದ ಪರಿಧಿಯಿಂದ ಮೇಲೆದ್ದು ಬರಲಾರದ ಸ್ಥಿತಿಯನ್ನು ಬಿಂಬಿಸುತ್ತಾ ಸಾಗಿದೆ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE