ಜೀವನದ ವಿವಿಧ ರಂಗುಗಳನ್ನು ಪರಿಚಯಿಸುವ ಕಥಾಸಂಕಲನವಿದು. ಕೆಲ ಕತೆಗಳು ಪೌರಾಣಿಕ ಹಿನ್ನೆಲೆಯಿಂದ ಕೂಡಿದ್ದರೂ ಪ್ರಸ್ತುತ ವಾಸ್ತವಕ್ಕೆ ತಾಳೆಯಾಗುವಂತಹವು. ಲೇಖಕಿ ಸಂಸ್ಕೃತ ಪ್ರಾಧ್ಯಾಪಿಕೆಯಾಗಿ ಕೆಲಸ ಮಾಡಿದವರು. ಮುಕ್ತ ಅಂತೆಯೇ ತಾತ್ವಿಕ ನೆಲೆಗಟ್ಟಿನ ವಿಚಾರಗಳನ್ನು ಈ ಕತೆಗಳು ಪ್ರತಿಫಲಿಸುತ್ತವೆ.ಉತ್ಥಾನ ಮಾಸಿಕದ ಕಥಾಸ್ಫರ್ಧೆಯಲ್ಲಿ ಎರಡನೇಯ ಬಹುಮಾನ ಗಳಿಸಿದ ಕತೆ ಸಹ ಈ ಸಂಕಲನದಲ್ಲಿದೆ. ಲೇಖಕಿ ಬರೆದ ಅನೇಕ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಬದುಕು ಬಣ್ಣ ಈ ಕಥಾಸಂಕಲನಕ್ಕೆ ೨೦೧೮ರ ಕಸಾಪ ಕೊಡುವ ಲಕ್ಷ್ಮಿದೇವಿ ಶಾಂತರಸ ಹೆಂಬೇರಳು ದತ್ತಿ ಪ್ರಶಸ್ತಿ ದೊರೆತಿದೆ.
ಧಾರವಾಡದಲ್ಲಿ ಜನಿಸಿದ ಡಾ. ದೀಪಾ ಜೋಶಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಲೇಖನ ಪ್ರಕಟಿಸಿದ್ದಾರೆ. ಉತ್ಠಾನ ಪತ್ರಿಕೆ ಸ್ಫರ್ಧೆಯಲ್ಲಿ ಎರಡನೇ ಬಹಿಮಾನ ಪಡೆದ ಕತೆಗಾರ್ತಿ ಅವರು. ಬದುಕು ಬಣ್ಣ ಮೊದಲ ಕಥಾ ಸಂಕಲನ. ಪ್ರಸ್ತುತ ಸಂಕಲನ ಕಸಾಪ ದತ್ತಿ ಪ್ರಶಸ್ತಿ ಗಳಿಸಿದೆ. ...
READ MORE