ಲೇಖಕ ಎಂ. ಶಿವರಾಂ (ರಾಶಿ) ಅವರ ಕಥಾ ಸಂಕಲನ ʼಮೃಗಶಿರ’. ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಪಾತ್ರಗಳೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿದೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆಯು ಮಹತ್ವದ್ದಾಗಿದೆ.
ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ...
READ MORE