ಪಾಂಡಿಚೇರಿಯ ಶ್ರೀ ಅರವಿಂದಾಶ್ರಮದ ಶ್ರೀ ಮಹಾ ತಾಯಿ ಅವರು ಬರೆದ ಹಿಂದಿ ಕಥೆಗಳ ಕನ್ನಡಾನುವಾದ ಕೃತಿಯೇ-ಶ್ರೀ ಮಹಾತಾಯಿಯವರ ಸುಂದರ ಕಥೆಗಳು. ಈ ಕಥೆಗಳಲ್ಲಿ ತಾಯಿ ಅವರ ಸುಂದರ ವ್ಯಕ್ತಿತ್ವ, ಉದಾರತೆ, ಆತ್ಮೀಯತೆಯನ್ನು ಕಾಣಬಹುದು. ಆತ್ಮಸಂಯಮ, ಸಾಹಸ, ಪ್ರಫುಲ್ಲತೆ, ಸ್ವಾವಲಂಬನ, ಯೋಗ್ಯ ಪರಿಶೀಲನೆ, ಮಾಡುವುದು ಮತ್ತು ಮುರಿಯುವುದು, ದೂರದರ್ಶಿತ್ವ ಹೀಗೆ 11 ಕಥೆಗಳನ್ನು ಹೊಂದಿದ ಕೃತಿ. ಮಕ್ಕಳು ಹಾಗೂ ದೊಡ್ವರಿಗೂ ಮಾರ್ಗದರ್ಶಿಯಾಗಬಲ್ಲ, ನೀತಿಪ್ರಧಾನ ಕಥೆಗಳು ಅತ್ಯಂತ ಪರಿಣಾಮಕಾರಿಯಾಗಿವೆ.
ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...
READ MORE