ಚೈತ್ರಯಾತ್ರೆ-ಲೇಕಕ ಮನೋಹರ ಜನ್ನು ಅವರ ಕಥಾ ಸಂಕಲನ. ಒಟ್ಟು 14 ಕಥೆಗಳಿವೆ. ಕತೆಗಾರ ಆರೂರ ಲಕ್ಷ್ಮಣ ಶೆಟ್ ಮುನ್ನುಡಿ ಬರೆದಿದ್ದು, ಸಂಕಲನದ 'ಚೈತ್ರ ಯಾತ್ರೆ' ಕತೆಯು ಪಾ.ಪು.ಪ್ರತಿಷ್ಠಾನದಿಂದ ಹಾಗೂ ‘ವಿಡಂಬನೆ' ಕತೆಯು ಸಂಯುಕ್ತ ಕರ್ನಾಟಕ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಕತೆ ‘ಯಮಪಾಕ’ವು ಮಾಜಿ ಪ್ರ ಧಾನಿ ರಾಜೀವ ಗಾಂಧಿ ಅವರ ಹತ್ಯೆ ನಂತರದ ಅಲ್ಲಿಯ ವಾಸ್ತವಿಕ ಘಟನೆ ಕುರಿತದ್ದಾಗಿದೆ. ಹೀಗೆ ವಿವಿಧ ಕತೆಗಳು ವಾಸ್ತವಿಕ ವಿದ್ಯಮಾನಗಳನ್ನು ವಸ್ತುವಾಗಿಸಿಕೊಂಡಿವೆ. ಅಸ್ತಿತ್ವಕ್ಕಾಗಿ ಹೋರಾಡುವ ರೀತಿ ನೀತಿಗಳನ್ನು ನವಿರಾಗಿ ತೆರೆದಿಡಲಾಗಿದೆ. ಸಾಧನೆ ಕತೆಯ ನಿರೂಪಣೆಯಲ್ಲಿ ಹೊಸತನವಿದೆ. ವಸ್ತು, ನಿರೂಪಣಾ ಶೈಲಿಯ ನವೀನತೆಯೊಂದಿಗೆ ಇಲ್ಲಿಯ ಕತೆಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ಮನೋಹರ ಜನ್ನು ಅವರು ಮೂಲತಃ ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮದವರು. ತಂದೆ ಜನಾರ್ದನ ಜನ್ನು ಹಾಗೂ ತಾಯಿ ವತ್ಸಲಾ ಜನ್ನು. 25-12-1953 ರಂದು ಜನನ. ಸ್ನಾತಕೋತ್ತರ ಪದವೀಧರರು. ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಕಾರ್ಖಾನೆಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಗಣಕಯಂತ್ರ ಬರಹಗಾರರಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಪರಿಸರ ಹೋರಾಟಗಾರರು. ಕೃತಿಗಳು: ಇವರ ಮಕ್ಕಳ ಕವನ ಸಂಕಲನ- ‘ಚುಕ್ಕಿ ಚಿತ್ತಾರ’. ರಾಜ್ಯ ಪ್ರಕಾಶಕ ಬರಹಗಾರ ಸಂಘದಿಂದ (2094) ಮೊದಲ ಬಹುಮಾನ ಪುರಸ್ಕಾರ ಲಭಿಸಿದೆ. ಕಾಲನ ತಂಬೂರಿ (ಕವನ ಸಂಕಲನ), ಚೈತ್ರಯಾತ್ರೆ,ಚುಟುಕುಮಾಲೆ-೧ (ಕಥಾ ಸಂಕಲನ), ಪರಿಷತ್ತಿಗೆ ಶಾಪವಾಗದಿರಿ (ವೈಚಾರಿಕ), ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ, ಕತೆ,ಕವನಗಳು ಪ್ರಕಟವಾಗಿವೆ. ...
READ MORE