’ಜನ್ನ ಮತ್ತು ಅನೂಹ್ಯ ಸಾಧ್ಯತೆ’ ಇದು ಆನಂದ ಋಗ್ವೇದಿ ಅವರ 11 ಕಥೆಗಳಿರುವ ಸಂಕಲನ. ಸಾಹಿತಿ ಜಯಂತ ಕಾಯ್ಕಿಣಿ ಅವರು ಕೃತಿಯ ಬೆನ್ನುಡಿಯಲ್ಲಿ ’ಕಥೆಯು ಗೊತ್ತಿದ್ದ ದಾರಿಯಲ್ಲಿ ಗೊತ್ತಿದ್ದ ರೀತಿಯಲ್ಲಿ ಹೋಗುವುದಕ್ಕೆ ರಸ್ತೆ ಸಾರಿಗೆ ಅಲ್ಲ. ಅದೊಂದು ಅನೂಹ್ಯ. ಹೂ, ಬೆಟ್ಟ, ಚಿಗುರುಗಳ ಕಾಡುಮೇಡುಗಳಲ್ಲಿ ನಮ್ಮದೇ ಕಾಲುದಾರಿಯಲ್ಲಿ ಏರುವ ಟ್ರಕ್ಕಿಂಗ್. ಅಲ್ಲಿ ಗುರಿಗಿಂತ ದಾರಿಯ ಸುಖವೇ ಮುಖ್ಯ. ಬರೆಯುವಾಗಲೇ ಎದುರಾಗುವ ರೋಮಾಂಚಕ ಕ್ಷಣಗಳನ್ನು ಇಲ್ಲಿಯ ಕಥೆಗಳು ಒಳಗೊಂಡಿವೆ. ಬಣ್ಣ, ರುಚಿ, ಗಂಧಗಳನ್ನು ಬದುಕಿನಲ್ಲಿ ಮೋಹಿಸಿ, ಭಾಷೆಯ ಹಂಗಿಲ್ಲದ, ಕಾವ್ಯವನ್ನು ಬದುಕಿನಲ್ಲಿ, ದೈನಿಕದ ಕ್ಷಣಗಳ ಮುಖಾಮುಖಿಯಲ್ಲಿ ದಕ್ಕಿಸಿಕೋ. ಮನುಷ್ಯನಾಗಿ ಹಿಗ್ಗು, ತಂತಾನೆ ಇದೆಲ್ಲ ನಿನ್ನ ಬರವಣಿಗೆಗೆ ಬರುತ್ತದೆ ಎಂದು ಮೌಲಿಕ ಸಲಹೆ ನೀಡಿದ್ದಾರೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE