ಮಾನವರ ಬದುಕಿನ ಸಂಕೀರ್ಣತೆ ಮತ್ತು ಬರವಣಿಗೆಯ ಪ್ರಬುದ್ಧತೆಗಾಗಿ ವಿಮರ್ಶಕರ ಮೆಚ್ಚುಗೆ ಪಡೆದ ಕತಾ ಸಂಕಲನ ‘ಮೊಲೆವಾಲು ನಂಜಾಗಿ'. ಕವಿ ಎಚ್.ಎಸ್. ವೆಂಕಟೇಶಮೂರ್ತಿ “ಅನುಭವದ ಘನತೆ ಮತ್ತು ವಿಸ್ತಾರದಿಂದ ಅವರ ಕಥೆಗಳು ನಮ್ಮ ಗಮನ ಸೆಳೆಯುತ್ತವೆ. ಕತೆ ಕಟ್ಟುವ ಕುಶಲತೆ ಅವರಿಗೆ ಸಹಜವಾಗಿ ದಕ್ಕಿರುವಂಥದ್ದೆ: ಹೊರತು ಪ್ರಜ್ಞಾಪೂರ್ವಕ ಕ್ರಿಯೆಯ ಫಲವಾಗಿ ಅಲ್ಲ, ಕಥೆ ಹೇಳುವಲ್ಲಿ ನಂಬಿಕೆಯುಳ್ಳ ಕತೆಗಾರ ಹಿರೇಮಠರು ಪ್ರಾಸ್ತಿ ಸಂಪ್ರದಾಯಕ್ಕೆ ಸೇರಿದ ನಮ್ಮ ಮುಖ್ಯ ವಾಸ್ತವವಾದಿ ಕತೆಗಾರರಾಗಿದ್ದಾರೆ” ಎಂದು ಕತಾ ರಚನೆಯ ಕುರಿತು ಶ್ಲಾಘಿಸಿದ್ದಾರೆ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE