ದಲಿತರ ಮನೋ ಕಥನಗಳನ್ನು ಮನೋಜ್ಞಾವಾಗಿ ಕತೆಗಳಲ್ಲಿ ಚಿತ್ರಿಸುವರಲ್ಲಿ ಮೊಗಳ್ಳಿ ಗಣೇಶ್ ಒಬ್ಬರು. ದಲಿತ ಲೋಕದ ಸಮಸ್ಯೆಗಳ ಸವಾಲನ್ನು ಕೇರಿಯ ಹೊರಗಿನಿಂದ ಆಗುವ ಸಂಕಟಗಳು ಹಾಗೂ ಸಮುದಾಯದ ಒಳಗಿನಿಂದ ಆಗುವ ನೋವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಲೇಖಕರ ಭಾಷೆ ಮತ್ತು ನುಡಿ ನಿರೂಪಣೆ ಓದುಗರನ್ನು ಸಮ್ಮೋಹನಗೊಳಿಸುವ ಕಥಾ ಸಂಕಲನ- ‘ದೇವರ ದಾರಿ’.
ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು. ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...
READ MORE