ದೇವರಿದ್ದಾನೆ ! ಎಚ್ಚರಿಕೆ !!

Author : ಪೂರ್ಣೇಶ ಮತ್ತಾವರ

Pages 84

₹ 75.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ದೇವರಿದ್ದಾನೆ ! ಎಚ್ಚರಿಕೆ !!’ ಕೃತಿಯು ಪೂರ್ಣೇಶ ಮತ್ತಾವರ ಅವರ ಕಥಾಸಂಕಲನವಾಗಿದೆ. ವ್ಯವಸ್ಥೆಯನ್ನೇ ದರ್ಪಣದ ಮೂಲಕ ಪ್ರತಿಬಿಂಬಿಸಿ ಹೋರಾಟದ ದಾರಿಯತ್ತ ಶೋಷಿತರನ್ನು ಅಣಿಗೊಳಿಸುವುದು ಇಲ್ಲಿನ ಕಥೆಗಳ ಉದ್ದೇಶ. ಹೋರಾಟವೂ ಒಂದು ದಿಕ್ಕಿನಲ್ಲಿ ಸಾಗದೆ ಹಲವು ಕವಲುಗಳಾಗಿ ಒಡೆದಿರುವುದು ಇಂದಿನ ದುರಂತ ಒಮ್ಮುಖ ಚಲನೆ ಇಲ್ಲದಿರುವುದೇ ಶೋಷಕರ ಮೇಲಾಗಲು ಕಾರಣ! ಹೋರಾಟದ ದಾರಿಗೆ ಅಡ್ಡ ಬಂಡೆಕಲ್ಲುಗಳು ಎದುರಾಗುತ್ತವೆ. ಕಾರ್ಮಿಕ ನಾಯಕ - ಸತ್ಯಾಗ್ರಹಿಗಳಿಗೆ ಆಮಿಷ ಒಡ್ಡಿ ದಾರಿ ತಪ್ಪಿಸಲಾಗುತ್ತದೆ. ದೀನ ದಲಿತರು ಉದ್ಘಾರವಾದರೆ ಜೀತಕ್ಕೆ ಯಾರೆಂಬ ಆತಂಕ ಶೋಷಿತರಿಗೆ, ಹೋರಾಟವನ್ನು ಹತ್ತಿಕ್ಕುವಲ್ಲಿ ಕಾರ್ಪೊರೇಟ್ ವಲಯಗಳು ಸದಾ ಮುಂದು. ಒಟ್ಟಿನಲ್ಲಿ ದೊಡ್ಡಮಟ್ಟದ ವರ್ಗ ಸಂಘರ್ಷಕ್ಕೆ ರಾಜಮಾರ್ಗ ಸದಾ ತೆರೆದಿರುತ್ತದೆ. ಇನ್ನು ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆ ಸದಾ ಜೊತೆಗಿರುವಾಗ ತನ್ನ ದುಃಸ್ಥಿತಿಗೆ ಶೋಷಿತನೂ ಕಾರಣನಾಗುತ್ತಾನೆ. ತನ್ನ ಉದ್ಧಾರಕ್ಕಾಗಿ ಯುಗಪುರುಷನೊಬ್ಬ ಅವತರಿಸುತ್ತಾನೆಂಬ ಗುಂಗಿನಲ್ಲೇ ಅವನ ಬಾಳು ಮುಗಿಯುತ್ತದೆ. ಮುಂದಿನ ಪೀಳಿಗೆ ಸಹಿಸಿ ಸಹಿಸಿ ಬೇಸತ್ತು ಜಗತ್ತನ್ನೇ ಬದಲಿಸುತ್ತೇವೆಂದು ಶಸ್ತ್ರಸಜ್ಜಿತರಾಗಿ ಎದ್ದು ನಿಲ್ಲುತ್ತಾರೆ. ಸೂಕ್ಷ್ಮವಾಗಿ - ನವಿರಾಗಿ ಇಂಥ ಸಾಧ್ಯತೆಗಳನ್ನು ಇಲ್ಲಿನ ಕಥೆಗಳು ಅನಾವರಣ ಮಾಡಿವೆ.

About the Author

ಪೂರ್ಣೇಶ ಮತ್ತಾವರ

ಲೇಖಕ ಪೂರ್ಣೇಶ ಮತ್ತಾವರ ಅವರು ಮೂಲತಃ ಚಿಕ್ಕಮಗಳೂರಿನವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಕಟ್ಟೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ದೇವರಿದ್ದಾನೆ ಎಚ್ಚರಿಕೆ ...

READ MORE

Reviews

(ಹೊಸತು, ಡಿಸೆಂಬರ್ 2014, ಪುಸ್ತಕದ ಪರಿಚಯ)

ಸಾಮಾಜಿಕ ಪರಿಸರದಿಂದ ಮೂಡಿಬಂದ ಇಲ್ಲಿನ ಕಥೆಗಳು ಸಂಘರ್ಷ ಅನಿವಾರ್ಯ ಎಂಬ ಸತ್ಯ ಹೇಳುತ್ತವೆ. ನಾವಿಂದು ಎಂತಹ ತಾರತಮ್ಯ ನೋಡುತ್ತಿದ್ದೇವೆ ? ಒಬ್ಬರು ಮೃಷ್ಟಾನ್ನ ಉಣ್ಣುತ್ತಿದ್ದರೆ ನೂರಾರು ಜನಕ್ಕೆ ಅಂಬಲಿಗೂ ಗತಿ ಇರುವುದಿಲ್ಲ. ವ್ಯವಸ್ಥೆಯನ್ನೇ ದರ್ಪಣದ ಮೂಲಕ ಪ್ರತಿಬಿಂಬಿಸಿ ಹೋರಾಟದ ದಾರಿಯತ್ತ ಶೋಷಿತರನ್ನು ಅಣಿನೆರೆಸುವುದು ಇಲ್ಲಿನ ಕಥೆಗಳ ಉದ್ದೇಶ. ಹೋರಾಟವೂ ಒಂದು ದಿಕ್ಕಿನಲ್ಲಿ ಸಾಗದೆ ಹಲವು ಕವಲುಗಳಾಗಿ ಒಡೆದಿರುವುದು ಇಂದಿನ ದುರಂತ ಒಮ್ಮುಖ ಚಲನೆ ಇಲ್ಲದಿರುವುದೇ ಶೋಷಕರ ಮೇಲಾಗಲು ಕಾರಣ! ಹೋರಾಟದ ದಾರಿಗೆ ಅಡ್ಡ ಬಂಡೆಕಲ್ಲುಗಳು ಎದುರಾಗುತ್ತವೆ. ಕಾರ್ಮಿಕ ನಾಯಕ - ಸತ್ಯಾಗ್ರಹಿಗಳಿಗೆ ಆಮಿಷ ಒಡ್ಡಿ ದಾರಿ ತಪ್ಪಿಸಲಾಗುತ್ತದೆ. ದೀನ ದಲಿತರು ಉದ್ಘಾರವಾದರೆ ಜೀತಕ್ಕೆ ಯಾರೆಂಬ ಆತಂಕ ಶೋಷಿತರಿಗೆ, ಹೋರಾಟವನ್ನು ಹತ್ತಿಕ್ಕುವಲ್ಲಿ ಕಾರ್ಪೊರೇಟ್ ವಲಯಗಳು ಸದಾ ಮುಂದು. ಒಟ್ಟಿನಲ್ಲಿ ದೊಡ್ಡಮಟ್ಟದ ವರ್ಗ ಸಂಘರ್ಷಕ್ಕೆ ರಾಜಮಾರ್ಗ ಸದಾ ತೆರೆದಿರುತ್ತದೆ. ಇನ್ನು ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆ ಸದಾ ಜೊತೆಗಿರುವಾಗ ತನ್ನ ದುಃಸ್ಥಿತಿಗೆ ಶೋಷಿತನೂ ಕಾರಣನಾಗುತ್ತಾನೆ. ತನ್ನ ಉದ್ಧಾರಕ್ಕಾಗಿ ಯುಗಪುರುಷನೊಬ್ಬ ಅವತರಿಸುತ್ತಾನೆಂಬ ಗುಂಗಿನಲ್ಲೇ ಅವನ ಬಾಳು ಮುಗಿಯುತ್ತದೆ. ಮುಂದಿನ ಪೀಳಿಗೆ ಸಹಿಸಿ ಸಹಿಸಿ ಬೇಸತ್ತು ಜಗತ್ತನ್ನೇ ಬದಲಿಸುತ್ತೇವೆಂದು ಶಸ್ತ್ರಸಜ್ಜಿತರಾಗಿ ಎದ್ದು ನಿಲ್ಲುತ್ತಾರೆ. ಸೂಕ್ಷ್ಮವಾಗಿ - ನವಿರಾಗಿ ಇಂಥ ಸಾಧ್ಯತೆಗಳನ್ನು ಇಲ್ಲಿನ ಕಥೆಗಳು ಅನಾವರಣ ಮಾಡಿವೆ.

Related Books