‘ಎಡೆ’ ಪ್ರವೀಣ್ ಕುಮಾರ್ ಜಿ. ಅವರ ಕತಾಸಂಕಲನ. ಇದು ಕಲ್ಯಾಣ ಕರ್ನಾಟಕದ ಬಯಲು ಸೀಮೆ ಅದರಲ್ಲೂ ಬಳ್ಳಾರಿ ಸೀಮೆಯನ್ನು ಮತ್ತು ಅಲ್ಲಿನ ಮಂದಿಯ ಬದುಕುಗಳನ್ನು ಅಲ್ಲಿನದೇ ಮಾತುಗಳಲ್ಲಿ ಹಿಡಿದಿಡುವ ಒಂಬತ್ತು ಬಗೆ ಬಗೆಯ ಕತೆಗಳ ಕಟ್ಟು(ಪುಸ್ತಕ). ಕನಸುಗಳು, ನನಸುಗಳು, ಗುಟ್ಟುಗಳು, ಇಶ್ಟದ ತಿಂಡಿ ತಿನಿಸುಗಳು, ಮಾಡುತ್ತಿರುವ ಕೆಲಸಗಳು, ಗುರುತು, ಬದುಕಿನ ತಿರುವುಗಳು, ಬಿಸಿಲನಾಡಿನ ನಸುಕು-ಏರು ಹೊತ್ತು- ಸುಡು ಬಿಸಿಲು- ಇಳಿಹೊತ್ತು- ಇರುಳುಗಳು, ದೇವರು, ಹುಟ್ಟು, ಸಾವು, ಎಳೆತನ, ಮುದಿತನಗಳು ಸೇರಿದಂತೆ ಬದುಕಿನ ಬೇರೆ ಬೇರೆಯದನ್ನು ಬೇರೆ ಬೇರೆ ನೆಲೆಗಟ್ಟುಗಳನ್ನು ಬೇರೆ ಬೇರೆ ನೋಟಗಳಲ್ಲಿ ಹೇಳುವ ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಸಮಕಾಲೀನ ಯುವ ಪ್ರತಿಭೆ ಪ್ರವೀಣ್ ಕುಮಾರ್ ಜಿ. ಅವರು ಮೂಲತಃ ಬಳ್ಳಾರಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶನ ಮತ್ತು ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೂರ್ಮಾವತಾರ, ಸಕ್ಕರೆ, ಎಂದೆಂದೂ ನಿನಗಾಗಿ, ಕಹಿ, ದನ ಕಾಯೋನು ಮತ್ತು ಮುಗುಳು ನಗೆ ಚಿತ್ರಗಳ ನಿರ್ದೇಶನ ತಂಡದ ಸದಸ್ಯರಾಗಿ ಕಾರ್ಯನಿರ್ವಹಣೆ. ಕತೆ, ಕವನ ರಚನೆ ಅವರ ಆಸಕ್ತಿಯ ಕ್ಷೇತ್ರಗಳು. ಅವರ ಕತೆಗಳು ಪ್ರಜಾವಾಣಿ, ಮಯೂರ, ಸುಧಾ, ತುಷಾರ, ಕನ್ನಡಪ್ರಭ, ವಿಜಯ ನೆಕ್ಸ್ಟ್, ಸಂಕ್ರಮಣ, ಮಂಗಳ ಮುಂತಾದ ಪತ್ರಿಕೆ, ಮ್ಯಾಗಸೈನ್‌ಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಎಡೆ (ಕತಾಸಂಕಲನ) ...
READ MORE