ಮುತ್ತಾಗದ ಮಳೆ ಹನಿ

Author : ವೈ.ಗ. ಜಗದೀಶ್

Pages 114

₹ 60.00




Year of Publication: 2009
Published by: ಅನು ಪ್ರಕಾಶನ
Address: 8ನೇ ಮುಖ್ಯ ರಸ್ತೆ, 3ನೇ ಘಟ್ಟ, 3ನೇ ಹಂತ, ಬಸವೇಶ್ವರ ನಗರ, ಬೆಂಗಳೂರು-560079

Synopsys

‘ಮುತ್ತಾಗದ ಮಳೆ ಹನಿ’ ಕೃತಿಯು ವೈ. ಗ. ಜಗದೀಶ್ ಅವರ ಕಥಾಸಂಕಲನ. ವರ್ಣ ಸಂಘರ್ಷದಿಂದ ವರ್ಗ ಸಂಘರ್ಷದಡೆಗೆ ಸಾಗಿದ ಮಲೆನಾಡಿನ ಬದುಕಿನ ಅಂತರ್ಯದ ಸೂಕ್ಷ್ಮಗಳನ್ನು ಕಥಾರೂಪದಲ್ಲಿ ಅಭಿವ್ಯಕ್ತಿಸಿದ ಕೃತಿ  ಇದು. 13 ವಿಭಿನ್ನ ಕತೆಗಳನ್ನು ಒಳಗೊಂಡಿದೆ. ಕತೆಗಳ ಮೂಲಕ ಮಲೆನಾಡಿನ ಒಂದು ಕಾಲಘಟ್ಟದ ಸ್ಥಿತ್ಯಂತರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಥಾ ಸಂಕಲನವಿದು, ಪತ್ರಕರ್ತ, ಸೃಜನಶೀಲ ಲೇಖಕ ವೈ.ಗ. ಜಗದೀಶ ಮಲೆನಾಡಿನಲ್ಲಿ ತಾವು ಕಂಡ ಬದುಕನ್ನು ಕಥೆಗಳ ಮೂಲಕ ವಾಸ್ತವವಾಗಿ ಚಿತ್ರಿಸಿದ್ದಾರೆ. ಮಳೆ ಹನಿ ಜಮೀನ್ದಾರಿ ಮತ್ತು ಬ್ರಾಹ್ಮಣ್ಯದ ವ್ಯವಸ್ಥೆಯಲ್ಲಿ ಎಲ್ಲ ವರ್ಣ, ವರ್ಗದ ಜನರ ಬದುಕು, ಬದುಕಿಗಾಗಿ ನಡೆದ ಸಂಘರ್ಷ ಈ ಕಥಾ ಸಂಕಲನದ ಕಥಾವಸ್ತುವಾಗಿದೆ. ಅದರಲ್ಲೂ ವ್ಯವಸ್ಥೆಯ ಕ್ರೌರ್ಯಕ್ಕೆ ನಲುಗುವ ಹೆಣ್ಣಿನ ಸ್ಥಿತಿಗತಿಗಳನ್ನು ಪೂರ್ವಗ್ರಹ, ವೈಭವೀಕರಣದ ನೆರಳು ತಾಕದಂತೆ ವಾಸ್ತವವಾಗಿ, ಸಹಜವಾಗಿ ಚಿತ್ರಿಸಿದ್ದಾರೆ.

About the Author

ವೈ.ಗ. ಜಗದೀಶ್

ಲೇಖಕ ವೈ.ಗ. ಜಗದೀಶ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಹಿರಿಯ ಪತ್ರಕರ್ತ, ಸಂವೇದನಶೀಲ ಬರಹಗಾರರು. ವಿಜಯಕರ್ನಾಟಕದಲ್ಲಿ ಪತ್ರಕರ್ತರಾಗಿ ನಂತರ ಪ್ರಜಾವಾಣಿ ಪತ್ರಿಕೆಯಲ್ಲಿ ರಾಜಕೀಯ ವರದಿಗಾರರಾಗಿದ್ದಾರೆ.  ಕೃತಿಗಳು: ಮುತ್ತಾಗದ ಮಳೆ ಹನಿ ಪ್ರಶಸ್ತಿ-ಪುರಸ್ಕಾರಗಳು: ಪ್ರೆಸ್ ಕ್ಲಬ್ ನಿಂದ ವಾರ್ಷಿಕ ಪ್ರಶಸ್ತಿ ಲಭಿಸಿದೆ. ...

READ MORE

Reviews

ನಿಜ ಮನುಷ್ಯ’ರ ಹುಡುಕಾಟದಲ್ಲಿ ‘ಮುತ್ತಾಗದ ಮಳೆಹನಿ’-ದೇಸೀ ಮಾತು-ದಿನೇಶ್ ಕುಮಾರ್

‘ಮುತ್ತಾಗದ ಮಳೆ ಹನಿ’ ಕೃತಿಯ ವಿಮರ್ಶೆ

ವರ್ಣ ಸಂಘರ್ಷದಿಂದ ವರ್ಗ ಸಂಘರ್ಷದಡೆಗೆ ಸಾಗಿದ ಮಲೆನಾಡಿನ ಬದುಕಿನ ಅಂತರ್ಯದ ಸೂಕ್ಷ್ಮಗಳನ್ನು ಕಥಾರೂಪದಲ್ಲಿ ಅಭಿವ್ಯಕ್ತಿಸಿದ ಕೃತಿ 'ಮುತ್ತಾಗದ ಮಳೆಹನಿ.' ಹದಿಮೂರು ವಿಭಿನ್ನ ಕತೆಗಳನ್ನು, ಕತೆಗಳ ಮೂಲಕ ಮಲೆನಾಡಿನ ಒಂದು ಕಾಲಘಟ್ಟದ ಸ್ಥಿತ್ಯಂತರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಥಾ ಸಂಕಲನವಿದು, ಪತ್ರಕರ್ತ, ಸೃಜನಶೀಲ ಲೇಖಕ ವೈ.ಗ. ಜಗದೀಶ ಮಲೆನಾಡಿನಲ್ಲಿ ತಾವು ಕಂಡ ಬದುಕನ್ನು ಕಥೆಗಳ ಮೂಲಕ ವಾಸ್ತವವಾಗಿ ಚಿತ್ರಿಸಿದ್ದಾರೆ. ಮಳೆ ಹನಿ ಜಮೀನ್ದಾರಿ ಮತ್ತು ಬ್ರಾಹ್ಮಣ್ಯದ ವ್ಯವಸ್ಥೆಯಲ್ಲಿ ಎಲ್ಲ ವರ್ಣ, ವರ್ಗದ ಜನರ ಬದುಕು, ಬದುಕಿಗಾಗಿ ನಡೆದ ಸಂಘರ್ಷ ಈ ಕಥಾ ಸಂಕಲನದ ಕಥಾವಸ್ತುವಾಗಿದೆ. ಅದರಲ್ಲೂ ವ್ಯವಸ್ಥೆಯ ಕ್ರೌರ್ಯಕ್ಕೆ ನಲುಗುವ ಹೆಣ್ಣಿನ ಸ್ಥಿತಿಗತಿಗಳನ್ನು ಪೂರ್ವಾಗ್ರಹ, ವೈಭವೀಕರಣದ ನೆರಳು ತಾಕದಂತೆ ವಾಸ್ತವವಾಗಿ, ಸಹಜವಾಗಿ ಚಿತ್ರಿಸಿದ್ದಾರೆ. ಇಲ್ಲಿ ನಗರಗಳು ಕಥಾವಸ್ತುವಿನ ಕೇಂದ್ರವಾಗದೇ ಸಾಂದರ್ಭಿಕ ಪ್ರಸ್ತಾಪಗಳಾಗಿವೆ. ಒಂದೆಡೆ ಸನಾತನ ನಂಬಿಕೆ, ಇನ್ನೊಂದಡೆ ಅಭಿವೃದ್ಧಿ ಹೆಸರಿನ ವಂಚನೆಗಳ ನಡುವೆ ನಲುಗುತ್ತಲೇ, ತಮ್ಮ ಸಾಂಸ್ಕೃತಿಕ, ಆರ್ಥಿಕ ಕೊಡುಕೊಳ್ಳುವಿಕೆಗಳ ಮೂಲಕ ಬದುಕುವ ಜನರ ಪ್ರೀತಿ - ಕಾಮ, ಪ್ರೀತಿ - ದ್ವೇಷಗಳ ಒಟ್ಟು ಗ್ರಹಿಕೆ ಮತ್ತು ಅಭಿವ್ಯಕ್ತಿ ಇಲ್ಲಿನ ಕಥೆಗಳಲ್ಲಿದೆ. ಮೊದಲ ಹತ್ತು ಕತೆಗಳು ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳ ಪ್ರದೇಶದ ಮಲೆನಾಡ ಜನರ ಬದುಕಿನ ಚಿತ್ರಣವಾಗಿದ್ದರೆ ಕೊನೆಯ ಮೂರು ಕತೆಗಳು ಜಮೀನ್ದಾರಿ ವ್ಯವಸ್ಥೆಗೆ, ಕೌರ್ಯಕ್ಕೆ ಪ್ರತಿಯಾಗಿ ಅದೇ ಮಲೆನಾಡಿನಲ್ಲಿ ಹುಟ್ಟಿಕೊಂಡ ನಕ್ಸಲ್ ಚಳುವಳಿಯ ವರ್ಗ ಹೋರಾಟದ ಚಿತ್ರಣವನ್ನು ಒಳಗೊಂಡಿವೆ. ಸಂಕಲನದ ಕೊನೆಯ ಕತೆ ವ್ಯವಸ್ಥೆಯ ವಿಮರ್ಶೆಯಾಗಿದೆ. ಅಂತಿಮವಾಗಿ ಮಾನವೀಯ ಮೌಲ್ಯಗಳ ಹುಡುಕಾಟ ಈ ಕಥಾ ಸಂಕಲನದ ಒಟ್ಟು ಆಶಯ.

(ಕೃಪೆ; ಹೊಸತು, ಬರಹ; ಸುಮಿತ್ರಾಸುತ ಅಗಸಬಾಳೆ, ಬೆಂಗಳೂರು)

Related Books