ಲೇಖಕಿ ಆಶಾ ಜಗದೀಶ್ ಅವರ ’ಮಳೆ ಮತ್ತು ಬಿಳಿಬಟ್ಟೆ’ ಕೃತಿಯು ಕಥಾ ಸಂಕಲನವಾಗಿದೆ.ಕೃತಿಗೆ ಮುನ್ನುಡಿ ಬರೆದಿರುವ ಮಾಲಿನಿ ಗುರುಪ್ರಸನ್ನ `ಸುಖವನ್ನಷ್ಟೇ ಹೇಳದ ಕತೆಗಳು, ಇಲ್ಲಿ ಶೋಷಣೆಗಳನ್ನು ಬಹಳ ಮನ ಮುಟ್ಟುವಂತೆ ಚಿತ್ರಿಸಿವೆ. ಕತೆಗಳು ಅವುಗಳಿಂದ ಹೊರಬರಲು ಇನ್ನಿಲ್ಲದಂತೆ ಹೋರಾಡುವ ಪಾತ್ರಗಳನ್ನೂ ಒಳಗೊಂಡಿವೆ. ಕೆಲವರು ಅಸಹಾಯಕರಾಗಿ ನಿಟ್ಟುಸಿರಿಟ್ಟು ಕೈ ಚೆಲ್ಲಿದರೆ, ಮತ್ತೆ ಕೆಲವರು ತಾತ್ಕಾಲಿಕವಾಗಿ, ಮತ್ತೆ ಕೆಲವರು ಶಾಶ್ವತವಾಗಿ ಹೊರಬರುತ್ತಾರೆ. ಈ ಕತೆಯಲ್ಲಿ ಹೆಣ್ಣಿನ ಗಟ್ಟಿತನ, ಆಕೆಯ ಸಾಮರ್ಥ್ಯ, ಕೊನೆಗೆ ಆಕೆಯ ಸಾವು, ಸಾವಿನ ನಂತರದ ಪ್ರಸಂಗಗಳು, ಸ್ಮಶಾನ ವೈರಾಗ್ಯ ಎಂಬ ಮಾತಿಗೆ ಸಾಕ್ಷಿಯಾಗಬಲ್ಲ ಬದಲಾಗುವ ಮನಸ್ಥಿತಿಗಳು ಹೀಗೆ ಹಲವಾರು ವಿಚಾರಗಳು ಹೇಳಿರುವ ಪರಿ ಭಿನ್ನವಾಗಿದೆ. ಅಮ್ಮನ ಮೇಲಿನ ಪ್ರೀತಿ, ನಂತರದ ನೋವು, ತದನಂತರದ ದುರಾಸೆ, ಮಾನವೀಯ ಮೌಲ್ಯಗಳ ಮರೆತ ಒಡಹುಟ್ಟುಗಳು ಇವೆಲ್ಲವುಗಳನ್ನು ಲೇಖಕಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕವಯತ್ರಿ ಆಶಾ ಜಗದೀಶ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಲವಾರು ಕತೆ, ಲೇಖನ, ಕವಿತೆ, ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ಮೌನ ತಂಬೂರಿ’ ಅವರ ಚೊಚ್ಚಲ ಕವನ ಸಂಕಲನ. ...
READ MORE