ಐವತ್ತು ಕಥೆಗಳ ಸಂಕಲನ ಇದು. ವ್ಯಕ್ತಿತ್ವ ವಿಕಾಸ, ಸಾಮಾನ್ಯಜ್ಞಾನ ವೃದ್ಧಿ ಆಶಯಗಳನ್ನು ಇಟ್ಟುಕೊಂಡು ರಚಿಸಲಾಗಿದೆ. ಬದುಕಿನ ಬಗ್ಗೆ ಅರಿಯಲು ಅನುವು ಮಾಡುವ ಕತೆಗಳಿವೆ. ಪ್ರತಿಯೊಂದು ಕತೆಯನ್ನೂ ಆಸಕ್ತಿಯಿಂದ ಓದುವಂತಿವೆ. ಸರಳ ನಿರೂಪಣೆ ಹಾಗೂ ಕತೆಯ ಮೂಲಕ ಸಾಧಿಸಬಹುದಾದ ಕಲಿಕೆಗೆ ಅನುವಾಗುವಂತೆ ವಾಕ್ಯಗಳನ್ನು ರಚಿಸಲಾಗಿದೆ. ಓದಿನ ಮೂಲಕ ಲಭಿಸುವ ಅನುಭವದ ಅಂಶಗಳ ಚರ್ಚೆಗೆ ಸೂಚನೆ, ಅಂತರ್ ನಿರೀಕ್ಷಣೆಗೆ ನೆರವಾಗುವ ಪ್ರಶ್ನೆಗಳನ್ನು ನೀಡಲಾಗಿದೆ. ಕತೆಗಳ ಜೊತೆಯಲ್ಲಿ ನೀತಿ ಮತ್ತು ಆಶಯಕ್ಕೆ ಸಂಬಂಧಿಸಿದ ರೇಖಾಚಿತ್ರಗಳಿರುವುದು ವಿಶೇಷ.
ನಾ. ಸೋಮೇಶ್ವರ ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE