'ತಿಮ್ಮೇಗೌಡರ ಕರಿ ಬೆಕ್ಕು' ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕತಾಸಂಕಲನ. ಮಲೆನಾಡು ಎಂದರೆ ಪ್ರಕೃತಿ ಮತ್ತು ಪ್ರಾಣಿಗಳೊಂದಿಗೆ ಹೊಸೆದುಕೊಂಡ ಬದುಕು. ಅಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳೇ ಬದುಕು ಕಟ್ಟಿಕೊಂಡಿರುತ್ತವೆ. ಅವಕ್ಕೆ ಮನುಷ್ಯಗಿಂತ ವಿಭಿನ್ನವಾದ ಅವುಗಳದ್ದೇ ಆದ ಬದುಕಿದೆ. ಗುಹೆ, ಕಾಡು, ಪೊದೆ, ಮರದ ಪೊಟರೆ-ಟೊಂಗೆ, ಕಣ್ಣಿನ ಸಂದುಗೊಂದುಗಳು ಎಲ್ಲೆಂದರಲ್ಲಿ, ಕೊನೆಗೆ ತೇವಾಂಶವಿರುವ ಮಣ್ಣಿನೊಳಗೂ ಕೋಟ್ಯಾನುಕೋಟಿ ಜೀವಿಗಳು ಬದುಕು ಸವೆಸುತ್ತವೆ, ಆದರೆ ದೇವರು ನಮಗೆ ಕೊಟ್ಟ ಬುದ್ಧಿಯ ಬಲದಿಂದ ನಾವು ಅವುಗಳನ್ನು ನಿಯಂತ್ರಿಸುವುದರ ಜೊತೆಗೆ ಅವುಗಳ ನಾಶವನ್ನೂ ಮಾಡುತ್ತಿದ್ದೇವೆ. 'ಪ್ರಾಣಿ ಮತ್ತು ಮನುಷ್ಯರ ನಡುವಿನ ತಣ್ಣಗಿನ ಸಂಘರ್ಷದಲ್ಲಿ ಅಳಿವು ಉಳಿವಿನ ಪ್ರಶ್ನೆ ಅವಕ್ಕೆ ಮಾತ್ರ ಕೊನೆಗೂ ಅದರಲ್ಲಿ ಗೆದ್ದೆ ಎಂದು ಬೀಗುವುದು ಮನುಷ್ಯನೇ “ಆದರೆ ಅದು ಗೆದ್ದು ಸೋಲು ಎನ್ನುವುದು ಮಾತ್ರ ಅವನಿಗೆ ತಿಳಿಯುತ್ತಿಲ್ಲ' ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೇಳನೆಯ ಕಂತು. ಇದರ ಜೊತೆಗೇ ಮನೋವೈಜ್ಞಾನಿಕ ಕಾದಂಬರಿಗಳ ಸರಣಿ ಕೂಡಾ ಮುಂದುವರೆಯುತ್ತಿದೆ ಎನ್ನುತ್ತಾರೆ ಲೇಖಕ ಗಿರಿಮನೆ ಶ್ಯಾಮರಾವ್.
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...
READ MORE