ಸುಮತೀಂದ್ರ ನಾಡಿಗ ಅವರ ಸಣ್ಣಕಥೆಗಳ ಸಂಕಲನ ‘ಗಿಳಿ ಮತ್ತು ದುಂಬಿ’. ಕೃತಿಗೆ ಖುದ್ದು ಸುಮತೀಂದ್ರ ನಾಡಿಗ ಅವೃಏ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ಈ ಕತೆಗಳು ನನ್ನ ಅನುಭವ ಪ್ರಪಂಚಕ್ಕೆ ನೇರವಾದ ಸಂಬಂಧಗಳನ್ನಿಟ್ಟುಕೊಂಡಿವೆ. ನನಗೇನಾಗುತ್ತಿದೆಯೆಂದು ದಿಗ್ಭ್ರಮೆಯಾಗಿದ್ದ ಕಾಲದಲ್ಲಿ ಈ ಕತೆಗಳು ನನ್ನ ಮನುಷ್ಯ ಸಂಬಂಧಕ್ಕೆ ದಿಕ್ಕುಗಳನ್ನು ತೋರಿಸಿವೆ’ ಎಂಬುದಾಗಿ ಸುಮತೀಂದ್ರ ನಾಡಿಗ ಅವರು ಮುನ್ನುಡಿಯಲ್ಲಿ ಹೇಳಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಗಿಳಿ ಮತ್ತು ದುಂಬಿ, ಚಂದ್ರನಿಲ್ಲದ ರಾತ್ರಿ, ಸ್ವಾವಲಂಬನೆಗೆ ಬ್ಲೇಡೇ ಸರಿ, ಅನಿರೀಕ್ಷಿತ, ಲೋಕೇಶಿಯ ನರಕ, ವಿಪರ್ಯಾಸ, ಇಬ್ಬರು ಪ್ರತಿಭಾವಂತರು, ಪಮ್ಮಿ, ಈವಾ ಮತ್ತು ರಾಬಿನ್, ಬೇರು ಬಿಟ್ಟವನು, ಸಂಜಜೀವರಾಯನ ಅಳಿಯ, ಓಡಿ ಹೋದವನು, ಬಯಾಲಜಿ ಮೇಷ್ಟ್ರು, ಕತ್ತೆ ಮತ್ತು ನಾಗರಹಾವು, ನಾಯಿ, ಹೆಬ್ಬಾವು ಸೇರಿ 16 ಕಥೆಗಳು ಈ ಸಂಕಲನದಲ್ಲಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು 1935ರ ಮೇ 4ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು), ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ಇಂಪತ್ಯಗೀತೆ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು), ಅಡಿಗರ ಕಾವ್ಯ, ...
READ MORE