ಆರುನೂರು ರೂಪಾಯಿ ಹಚ್ಚೆ

Author : ಕೇಶವ ಕುಡ್ಲ

Pages 112

₹ 120.00




Year of Publication: 2020
Published by: ಕುಕ್ಕೇಶ್ರೀ ಪ್ರಕಾಶನ
Address: #21, ಮಾಚೋನಹಳ್ಳಿ ಕಾಲೋನಿ, ವಿಶ್ವನೀದಂ ಅಂಚೆ, ಬೆಂಗಳೂರು ಉತ್ತರ ತಾಲ್ಲೂಕು 560009, \n
Phone: 984505248

Synopsys

'ಆರುನೂರು ರೂಪಾಯಿ ಹಚ್ಚೆ' ಕೇಶವ ಕುಡ್ಲ ಅವರ ಕತಾಸಂಕಲನ. ಇಲ್ಲಿನ ಹೆಚ್ಚಿನ ಕಥೆಗಳ ವಸ್ತು ಒಂದು ಪೀಳಿಗೆಗೆ ಇರುವ, ತಾವು ಹುಟ್ಟಿಬೆಳೆದ ಮಣ್ಣಿನ ಮೇಲಿನ ಮಮಕಾರ ಅಥವಾ ಮೋಹ, ಮತ್ತು ನಂತರದ ಪೀಳಿಗೆಗೆ ಅದನ್ನು ಮಾರಿದರೆ ಸಿಕ್ಕುವ ಹಣದ ಮೇಲಿನ ದಾಹ. ನೆಲದ ಮೇಲಿನ ಆಕ್ರಮಣದ ಜೊತೆಜೊತೆಗೆ ಮಣ್ಣಿನೊಡನೆ ಬೆಸೆದುಕೊಂಡಿರುವ ನಿರ್ಮಲ ಮನಸ್ಸುಗಳ ಮೇಲಿನ ಆಕ್ರಮಣವೂ ಮುಖ್ಯವಾಗುತ್ತದೆ. ಮನಸ್ಸುಗಳ ಮೇಲೆ, ಆಸೆಯ ಮೇಲೆ, ನೆಲವನ್ನು ನಂಬಿ ಬದುಕು ಕಟ್ಟಿಕೊಳ್ಳುವವರ ಭವಿಷ್ಯದ ಮೇಲೆ ನಡೆಯುವ ಆಕ್ರಮಣ ಇಲ್ಲಿನ ಕೆಲವು ಕಥಾವಸ್ತುಗಳಿಗೆ ಸಂಕೇತವಾಗಬಹುದು. ನನ್ನ ಬಾಲ್ಯ ಮತ್ತು ಯೌವನದ ಸಂದಿಗ್ದ ಕಾಲದಲ್ಲಿ ಹಳ್ಳಿಯಲ್ಲಿ ನೆಲೆಸಿದ್ದೆವು. ತಾಯಿಯ ತವರು ಮತ್ತು ತಂದೆಯ ಮೂಲ ನೆಲೆ ಹಳ್ಳಿಯೆ ಆಗಿದ್ದ ಕಾರಣ ಅಲ್ಪಸ್ವಲ್ಪ ಹಳ್ಳಿಯ ಪರಿಚಯವಿದ್ದರೂ ಹಳ್ಳಿಯಲ್ಲೆ ಕಳೆದ ಆ ಸಮಯದಲ್ಲಿ ಹಳ್ಳಿತನವು ಮನಸ್ಸಿಗೆ ವಿಶೇಷವಾಗಿ ಹತ್ತಿರವಾಗಿತ್ತು.

About the Author

ಕೇಶವ ಕುಡ್ಲ

ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...

READ MORE

Related Books