ಹಿರಿಯ ಸಾಹಿತಿ ಎಂ.ವೀ. ಸೀತಾರಾಮಯ್ಯನವರು ಬರೆದ ಸಣ್ಣ ಕಥೆಗಳ ಸಂಕಲನ-ರತಿದೇವಿ ಮತ್ತು ಇತರ ಕಥೆಗಳು. ರಷ್ಯಾದ ಮ್ಯಾಕ್ಸಿಂಗಾರ್ಕಿಯ ಬೊಲೆಸ್ಲೊ ಕಥೆಯನ್ನು ಅದೇ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ ಕಥೆ ಇಲ್ಲಿದೆ. ರತಿದೇವಿ, ಕಡಲೆಪುರಿಯ ಕೆಂಪಮ್ಮ, ಕನ್ನಡಿಯಲ್ಲಿ ಕಂಡದ್ದು, ಚಿತ್ರಪಟ ತಾರೆ ಹೀಗೆ ಒಟ್ಟು ಏಳು ಕಥೆಗಳು ಇಲ್ಲಿ ಸಂಕಲನಗೊಂಡಿವೆ. ಸಾಮಾಜಿಕ ವಿಷಯ ವಸ್ತುಗಳಿರುವ ಕಥೆಗಳು ನಿರೂಪಣಾ ಶೈಲಿಯಿಂದ ಓದುಗರನ್ನು ಸೆಳೆಯುತ್ತವೆ.
ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ. ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...
READ MORE