ಹಿಟ್ಲರ್ ಕಾಲದ ಶುದ್ಧ ಆರ್ಯತನವನ್ನೇ ಹುಡುಕಿಕೊಂಡು ಹೊರಟ ಕಥೆಯನ್ನು ಕಾದಂಬರಿಯಲ್ಲಿ ಕೊಡಲಾಗಿದೆ. ಮಾನವೀಯತೆಯ ಮೇಲಿನ ದೌರ್ಜನ್ಯದ ಹಿಂದಿನ ವಾಂಛೆ, ಬಳಸಿಕೊಳ್ಳುವ ಗುಣ, ಒಂದು ಜನಾಂಗದ ದುರ್ಬಳಕೆ, ಮಹಿಳೆಯರನ್ನು ಹೆರುವ ಯಂತ್ರವಾಗಿಸಿದ್ದು, ಅದೆಲ್ಲಕ್ಕೂ ಇತಿಹಾಸ ಸುಮ್ಮನೆ ಸಾಕ್ಷಿಯಾಗಿದ್ದರ ಕುರಿತು ಇಲ್ಲಿ ವಿವರಿಸಲಾಗಿದೆ. ಗೌರಿಹತ್ಯೆಯ ಹಿಂದಿನ ಥಿಂಕ್ ಟ್ಯಾಂಕರ್ಸ್‌ಗಳನ್ನೇ ಕಥೆಯ ಮೂಲವಾಗಿರಿಸಿಕೊಂಡು ಹೆಣೆದಿರುವ ಕಥೆ. ರುಂಡ ಕಸಿ ಮಾಡಿದ ವೈಜ್ಞಾನಿಕ ಪ್ರಯೋಗವನ್ನು ಆಧಾರವಾಗಿಸಿಕೊಂಡು ಬರೆದಿರುವ ರುಂಡ ಗಂಡ ಕಥೆಯನ್ನು ಕಾದಂಬರಿ ಒಳಗೊಂಡಿದೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE