ವಿಜಯ ಕರ್ನಾಟಕದ ಯುಗಾದಿ ವಿಶೇಷತೆಗಾಗಿ ಕಥಾಸ್ಪರ್ಧೆಗೆ ಬಂದ ಕಥೆಗಳಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿದ 25 ಕಥೆಗಳ ಸಂಗ್ರಹವೇ ಈ ಕೃತಿ.
ವಿಜಯ ಕರ್ನಾಟಕದ ಸಿಬ್ಬಂದಿ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ, ಶರಣು ಹುಲ್ಲೂರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಇಲ್ಲಿ ಅರ್ಪಣಾ ಎಚ್.ಎಸ್ ಅವರ ಫಿನಿಕ್ಸ್, ಮಂಜುನಾಥ ವಿ.ಎಂ. ಅವರ ಕಾರ್ಟೂನಿಸ್ಟ್ ದಂಗೆ, ಚನ್ನಪ್ಪ ಅಂಗಡಿ ಅವರ ಹಲೋ, ಸೌಮ್ಯ ಕಲ್ಯಾಣ್ ಕರ್ ಅವರ ಕಪ್ಪು ಬಿಳುಪಿನ ನಡುವೆ, ಡಾ. ಆನಂದ್ ಋಗ್ವೇದಿ ಅವರ ಕಾರ್ಣೀಕ, ಸಂತೋಷ್ ನಿಗಳೆ ಅವರ ಪ್ರತಿಭಟನೆ, ಆರ್. ಸಿ. ಚಿತ್ತವಾಡಗಿ ಅವರ ಆರಾ.., ದೀಪ್ತಿ ಭದ್ರಾವತಿ ಅವರ ಮಣ್ಣಿನ ಆಟ, ಚೈತ್ರಾ ಅರ್ಜುನಪುರಿ ಅವರ ಮದುವೆ, ಗೀರ್ವಾಣಿ ಅವರ ವರ್ಜಿನ್ ಸೇರಿದಂತೆ ನಾಡಿನ ಹಿರಿಕಿರಿ ಕಥೆಗಾರರ 25 ಕಥೆಗಳಿವೆ.
ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ. ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ. ...
READ MORE