‘ಲಿಂಗಯ್ಯ’ ಹಿರೇಮಲ್ಲೂರ ಈಶ್ವರನ್ ಅವರ ಕಥೆ. ಅದನ್ನು ಜೀವನ ಚರಿತ್ರೆ ಅಂತಲೂ ಕರೆಯಬಹುದು ಎಂದಿದ್ದಾರೆ ಈಶ್ವರನ್. ಲಿಂಗಯ್ಯ- ಸಿಂದಗಿಯ ಪಟ್ಟದೇವರ ಕಥೆ. ಈಶ್ವರನ್ ಅವರು ಹೇಳಿರುವಂತೆ ಇದು ಜೀವನ ಚರಿತ್ರೆ ಎಂದರೆ ಚರಿತ್ರೆ. ಕಥೆ ಎಂದರೆ ಕಥೆ. ಕಿರು ಕಾದಂಬರಿ ಎಂದರೆ ಕಿರು ಕಾದಂಬರಿ. ಕಾದಂಬರಿಗಿಂತಲೂ ಸೋಜಿಗವಾದ ಕಥೆ. ಸಿಂದಗಿಯ ಪಟ್ಟದ್ದೇವರೆಂದೇ ಖ್ಯಾತರಾದ ಲಿಂಗಯ್ಯ ಬಡತನದ ಕುಟುಂಬದಲ್ಲಿ ಹುಟ್ಟಿದರು. ಸಿಂದಗಿಯ ಪಟ್ಟದ್ದೇವರಾದ ಮೇಲೂ ಸಾಮಾನ್ಯನಂತೆ ಬದುಕಿದರು. 12 ವರ್ಷ ಶಿವಯೋಗ ಮಂದಿರದಲ್ಲೂ ಆರು ವರ್ಷ ಕಾಶಿಯಲ್ಲೂ ವಿದ್ಯಾಭ್ಯಾಸ ಮಾಡಿ ಬಂದು ಹಾನಗಲ್ ಕುಮಾರಸ್ವಾಮಿಗಳ ಶಿಷ್ಯರಾಗಿ. ಅವರು ತೋರಿದ ಮಾರ್ಗದಲ್ಲಿ ನಡೆದರು. ಪಟ್ಟದೇವರು ಸಮಾಜಕ್ಕೆ ಕರ್ಪೂರವಾದರು. ಅದರ ನೋವನ್ನು ಪರಿಹರಿಸುವಲ್ಲಿ ಅವರು ಪರಿವ್ರಾಜಕರಾದರು. ಭಕ್ತರು ಕರೆದಲ್ಲಿಗೆ ಹೋಗಿ ನೊಂದವರ ಕಣ್ಣೀರನ್ನು ಒರೆಸ ಹೊರಟ ಮಾಂತ್ರಿಕ- ವೈದ್ಯಗುರು ಪಟ್ಟದೇವರ ಚಿತ್ರ ಈ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತಿದೆ. ಲಿಂಗಯ್ಯನವರ ಕಥೆಯೊಂದಿಗೆ ಪಟ್ಟದೇವರ ರಕ್ತಸಂಬಂಧಿ ಸಿದ್ಧರಾಮರ ಕಥೆಯೂ ಇಲ್ಲಿ ಪ್ರಮುಖ ಭಾಗವಾಗಿದೆ. ಇದು ಈಶ್ವರನ್ ಅವರ ಮನೋಜ್ಞ ಕೃತಿ.
ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರು ಈಶ್ವರನ್, ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರು ಗ್ರಾಮದವರು. ಲಿಂಗರಾಜ ಮಹಾವಿದ್ಯಾಲಯದಿಂದ ಎಂ.ಎ. ಪಡೆದ ನಂತರ ಕೆಲಕಾಲ ಸೊಲ್ಲಾಪುರದಲ್ಲಿ ಕನ್ನಡ ಅಧ್ಯಾಪಕ ರಾಗಿದ್ದರು. 'ಹರಿಹರ ಕವಿಯ ಕೃತಿಗಳು - ಒಂದು ಸಂಖ್ಯಾನಿರ್ಣಯ' ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಉನ್ನತ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಡಿ.ಲಿಟ್. ಪದವಿ ಪಡೆದರು. ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನ ಪ್ರಾಧ್ಯಾಪಕರಾಗಿದ್ದರು. ನಂತರ ಹಾಲೆಂಡ್ ನಲ್ಲಿ ನೆಲೆಸಿದರು. ಮನುಸ್ಕೃತಿ ಮತ್ತು ಪಾಶ್ಚಾತ್ಯ ಕುಟುಂಬ ಜೀವನ ಕುರಿತು ಸಂಶೋಧನೆ ನಡೆಸಿ ಇಂಗ್ಲಿಷ್ ನಲ್ಲಿ ಗ್ರಂಥ ಪ್ರಕಟಿಸಿದ್ದಾರೆ. ಅವರು ರಚಿಸಿದ 8 ಗ್ರಂಥಗಳ ಜೊತೆಗೆ 50ಕ್ಕೂ ಹೆಚ್ಚು ...
READ MORE