ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು

Author : ಡಿ.ವಿ. ಗುರುಪ್ರಸಾದ್

Pages 152

₹ 160.00




Year of Publication: 2024
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

`ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು’ ಡಿ.ವಿ. ಗುರುಪ್ರಸಾದ್ ಅವರ ಕಥಾ ಸಂಕಲನವಾಗಿದೆ. ಈ ಪುಸ್ತಕದಲ್ಲಿನ ಕಥೆಗಳಿಗೆ ಸಹಜವಾಗಿಯೇ ಅಥೆಂಟಿಸಿಟಿ ದಕ್ಕಿದೆ. ಪ್ರಜೆಗಳಲ್ಲಿ ಎಚ್ಚರಿಕೆಯ ಘಂಟೆಯನ್ನು ಮೊಳಗಿಸುವ ಇವುಗಳಲ್ಲಿ ವಿವಿಧ ಸ್ತರಗಳ ಜನರು ಕಾಣಬರುತ್ತಾರೆ. ಅದ್ದೂರಿ ಬಯಕೆಗಳು, ಅತೃಪ್ತಿ, ದುರಾಸೆ, ಖ್ಯಾತಿಯನ್ನು ಗಳಿಸುವ ಹಂಬಲ, ಹೇಗಾದರೂ ಹಣ ಗಳಿಸುವ ಲೆಕ್ಕಾಚಾರಗಳು, ಸ್ಟೇಚ್ಛಾ ಜೀವನದತ್ತ ತುಯ್ಯುವ ಮನಸ್ಸು, ರೈಸ್ ಪುಲ್ಲಿಂಗ್, ಧುತ್ತೆಂದು ಮೇಲೆದ್ದು ಅಬ್ಬರಿಸುವ ಕಾಮದ ಕೂಗು, ಮೊದಲಾದವು ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತವೆ ಎನ್ನುವುದು ಇಲ್ಲಿ ಮನಕ್ಕೆ ತಾಗುವಂತೆ ಚಿತ್ರಿತವಾಗಿವೆ. ಶುದ್ಧ ಹೃದಯ, ಮನಸ್ಸಿನ ಮೇಲಿನ ಹತೋಟಿ, ಪ್ರಾಮಾಣಿಕತೆಯೇ ಪ್ರಫುಲ್ಲ ಬದುಕಿಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ, ಹಾಗೂ ಬದುಕನ್ನು ಜತನವಾಗಿ ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಮನದಟ್ಟು ಮಾಡುತ್ತವೆ. ಪ್ರಸಿದ್ಧ ಚಿಂತಕರ ಅನನ್ಯ ಚಿಂತನೆಗಳನ್ನೂ ಸಹ ಸಂದರ್ಭಾನುಸಾರ ಕೃತಿಯಲ್ಲಿ ಬಳಸಲಾಗಿದ್ದು ಅವು ಕೃತಿಗೆ ವಿಶೇಷ ಮೆರಗನ್ನು ತಂದಿತ್ತಿವೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books