ಅಕ್ಕನ ಮದುವೆ ಕೃತಿಯು ಕು.ಗೋ. ಅವರ ಕಥಾ ಸಂಕಲನ. ಇಲ್ಲಿರುವ ಕಥೆಗಳು ಓದುಗರಿಗೆ ಕಥೆಗಳಿಗಿಂತ ಲಘು ಪ್ರಬಂಧಗಳಾಗಿ ಕಾಣುತ್ತವೆ. ಹಾಸ್ಯ ಪ್ರಧಾನವಾಗಿರುವ ಇಲ್ಲಿನ ಬರಹಗಳು ಓದುಗರಿಗೆ ಹಾಸ್ಯದ ರಸದೌತನವನ್ನು ನೀಡುತ್ತವೆ. ಸುತ್ತಮುತ್ತಲಿನ ಸಮಾಜದಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವ ಮನಸ್ಸಿಗೆ ಹಿತವೆನಿಸುವ ಸನ್ನಿವೇಶಗಳು ಈ ಕಥಾ ಸಂಕಲನದ ಕಥಾ ವಸ್ತು. ಹಾಸ್ಯ ರಸವೇ ಪ್ರಮುಖವಾಗಿರುವ ಕೃತಿಯಂತೆ ಕಂಡು ಬಂದರೂ, ಜನಸಾಮಾನ್ಯರ ಬದುಕಿನಲ್ಲಿ ನಡೆಯುವಂತಹ ಜಂಜಾಟಗಳ ಕುರಿತು ಅರಿಯುವಂತಹ ಶೈಲಿಯ ನಿರೂಪಣೆ ಈ ಪುಸ್ತಕದಲ್ಲಿದೆ. ಪ್ರಪಂಚದ ಹಾಗು ಹೋಗುಗಳನ್ನು ಬಿಟ್ಟ ಕಣ್ಣುಗಳಿಂದ ನೋಡಿ ಸಮಾಜದ ಹುಳುಕುಗಳನ್ನು ಹೆಕ್ಕಿ ತೆಗೆದು ಅವುಗಳ ಮೇಲೆ ವ್ಯಂಗ್ಯಾತ್ಮಕ ರೀತಿಯಲ್ಲಿ ಬರಹಗಳನ್ನು ಬರೆಯುವುದು ಸುಲಭ ಸಾಧ್ಯವಲ್ಲ. ಅಂತಹ ಸಾಹಸದಲ್ಲಿ ಲೇಖಕರು ಸಫಲರಾಗಿದ್ದಾರೆ. ಸಮಾಜದಲ್ಲಿ ಪ್ರಸ್ತುತವಾಗಿರುವ ಮಡಿ ಮೈಲಿಗೆ, ಅಹಂಕಾರ, ಪ್ರತಿಷ್ಟೆ ಇಂತಹವುಗಳ ಕುರಿತಾದಂತಹ ಬರಹಗಳು ಓದುಗರ ಮನಸೆಳೆಯುತ್ತವೆ. ಒಟ್ಟಾರೆಯಾಗಿ ಸಮಾಜದ ದೌರ್ಬಲ್ಯಗಳ ಕುರಿತು ಕುಹಕವಾಡುವ ಪುಸ್ತಕ ಇದಾಗಿದೆ. ಹಾಸ್ಯದೊಂದಿಗೆ ಒಂದು ಉತ್ತಮವಾದ ಸಂದೇಶವನ್ನು ಓದುಗರಿಗೆ ಒದಗಿಸುವಲ್ಲಿ ಈ ಪುಸ್ತಕವು ಸಫಲವಾಗಿದೆ.
'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...
READ MORE