ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಯುತ್ತ ಸುಖ ನೀಡುವ ಕತೆಗಳಿವು. ಒಟ್ಟು 16 ಕತೆಗಳಿದ್ದು ಸ್ತ್ರೀ ಸಂವೇದನೆಗಳೊಂದಿಗೆ ಚಿಂತನೆಗಳಿಗೆ ಎಡೆಮಾಡುವಂತಿವೆ. ತಾಜಾತನದ ಹೆಪ್ಪುಗಟ್ಟಿ ಭಾವಸಂಗಮದ ಇಲ್ಲಿಯ ಕತೆಗಳು ನಮ್ಮವೇ ಎನ್ನಿಸುವಷ್ಟು ಆಪ್ತ, ಮಧುರ.
ಕೊಡಗು ಜಿಲ್ಲೆಯವರಾದ ಶಾಂತಿ ಕೆ. ಆಪ್ಪಣ್ಣ ಅವರು ವಿಭಿನ್ನ ಕತೆಗಳ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ವೃತ್ತಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿರುವ ಅವರು 'ಮನಸು ಅಭಿಸಾರಿಕೆ' ಕಥಾ ಸಂಕಲನ ಪ್ರಕಟಿಸಿದ್ದಾರೆ. ಅವರ ಈ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಸಂದಿದೆ. ...
READ MOREಬದುಕಿನ ಸುತ್ತವೇ ಹೆಣೆದ ಕಥೆಗಳು ಇವು. ಮನುಷ್ಯ ಸಂಬಂಧಗಳು ಮತ್ತು ಪ್ರೀತಿವಾತ್ಸಲ್ಯಗಳೇ ಈ ಕಥೆಗಳ ಜೀವದ್ರವ್ಯವಾಗಿ ಮೂಡಿಬಂದಿವೆ. ಈ ಸಂಕಲನದಲ್ಲಿ 13 ಕಥೆಗಳಿವೆ. ಸ್ತ್ರೀ ಸಂವೇದನೆಯೂ ಇವುಗಳಲ್ಲಿ ಹಾಸುಹೊಕ್ಕಾಗಿದೆ. ಕೊನೆಯಲ್ಲಿ ಹೇಳಬೇಕಾದ್ದನ್ನು ನೇರವಾಗಿ ಹೇಳದೆ ಸೂಚ್ಯವಾಗಿ ಧ್ವನಿಸುವ ಗುಣ ಮತ್ತು ಕ್ರಮವನ್ನು ಕಥೆಗಾರ್ತಿ ಕಾಯ್ದುಕೊಂಡಿದ್ದಾರೆ. ಈ ಗಟ್ಟಿತನವೇ ಎಲ್ಲ ಕಥೆಗಳಲ್ಲಿಯೂ ಢಾಳಾಗಿಯೂ ಕಾಣಿಸುತ್ತವೆ ಮತ್ತು ಓದುಗರನ್ನು ಕಾಡುತ್ತವೆ. ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ, ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಸುತ್ತಾ ಸುಖ ನೀಡುವ ಕಥೆಗಳು ಇವು ಎಂದರೆ ಉತ್ಪ್ರೇಕ್ಷೆ ಎನಿಸದರು. ಇಲ್ಲಿಯ ಬಹುತೇಕ ಕಥೆಗಳು ನಮ್ಮವೇ ಎನ್ನಿಸುವಷ್ಟು ಆಪ್ತವೂ, ಮಧುರವೂ ಆಗಿವೆ. ಆದರೆ, ಪ್ರತಿ ಕಥೆಯಲ್ಲೂ ಸಣ್ಣಸಣ್ಣ ವಿವರಗಳನ್ನು ಕಥೆಗಾರ್ತಿ ಪೋಣಿಸುತ್ತಾ ಹೋಗಿರುವುದು ಸರಾಗ ಓದಿನ ಹಾದಿಯನ್ನು ತುಸು ತ್ರಾಸಗೊಳಿಸುತ್ತದೆ.
ಕೃಪೆ : ಪ್ರಜಾವಾಣಿ (2020 ಮಾರ್ಚಿ 15)
---