ಗಂಧವತೀ ಪೃಥ್ವಿ' ಯಲ್ಲಿಯ ಹೆಚ್ಚಿನ ಕಥೆಗಳು ಜೀವನದಲ್ಲಿಯ ರಾಗ-ದ್ವೇಷಗಳು, ಅವುಗಳೊಂದಿಗೆ ತಳಕು ಹಾಕಿಕೊಂಡ೦ತಿರುವ ಋಣಾತ್ಮಕ ಗುಣಗಳಾದ ಸಂಶಯ, ಅದರಿಂದಾಗುವ ಅನಾಹುತಗಳು... ಇವೆಲ್ಲ ಭಾವನೆಗಳ ಸಹಜ ಅಭಿವ್ಯಕ್ತಿಯನ್ನೊಳಗೊಂಡಿವೆ . ಹೆಣ್ಣು ಗಂಧವತಿಯಾದ ಈ ಭೂಮಿಯಂತೆಯೇ ಜೀವನದ ಧನಾತ್ಮಕ ಗುಣಗಳು ಒಳಗೊಂಡಿರುವುದನ್ನು ಇಲ್ಲಿಯ ಅನೇಕ ಕಥೆಗಳಲ್ಲಿ ಕಾಣಬಹುದು.
ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ. ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...
READ MORE