ಸೋಮದೇವನ ಕಥಾಸರಿತ್ಸಾಗರ

Author : ಎಸ್. ಆರ್. ಲೀಲಾ

Pages 200

₹ 240.00




Year of Publication: 2023
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

‘ಸೋಮದೇವನ ಕಥಾಸರಿತ್ಸಾಗರ’ ಕೃತಿಯು ಡಾ. ಎಸ್. ಆರ್. ಲೀಲಾ ಅವರ ಹೆಸರಾಂತ ರಮ್ಯ ಕಥಾಸಂಕಲನ ಕೃತಿಯಾಗಿದೆ. ಈ ಕೃತಿಯು ಸೋಮದೇವನ ಕುರಿತು ಮಾತನಾಡುತ್ತದೆ. ಭಾರತೀಯ ಸಮಾಜವೆಂದರೆ ಸನಾತನ, ಬೌದ್ಧ, ಜೈನಧರ್ಮಗಳ ಕೂಡು ಕುಟುಂಬ, ಇಲ್ಲಿನ ಕಥೆಗಳು ಸಮಾಜದಲ್ಲಿ ಈ ಮೂರೂ ಧರ್ಮಗಳು ಮಿಳಿತವಾಗಿ ಜನಜೀವನವನ್ನು ಪ್ರಭಾವಿಸುವುದನ್ನು ಕಂಡರಿಸುತ್ತವೆ. ಬೌದ್ಧರಾಗಲಿ, ಜೈನರಾಗಲಿ, ಸನಾತನ ಧರ್ಮದಂತೆ ಕರ್ಮಸಿದ್ಧಾಂತವನ್ನು ಅನೇಕ ಲೋಕಗಳ ಅಸ್ತಿತ್ವವನ್ನು ನಂಬಿದವರು. ಒಂದು ಲೋಕದವರು ಮತ್ತೊಂದು ಲೋಕಕ್ಕೆ ಬಂದುಹೋಗುವ ಪರಿಪಾಠ ಇಲ್ಲಿನ ಕಥೆಗಳಲ್ಲಿ ಕಂಡುಬರುತ್ತದೆ. ಲೋಕಗಳಿಗೆಲ್ಲ ಪರಸ್ಪರ ಸಂಬಂಧಗಳಿವೆ. ಮನುಷ್ಯರು ದೇವಲೋಕಗಳಿಗೆ ಹೋಗುತ್ತಾರೆ. ದೇವತೆಗಳು ಮನುಷ್ಯಲೋಕದಲ್ಲಿ ಜನ್ಮ ತಾಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಸೃಷ್ಟಿಯ ಬಗ್ಗೆ ಒಂದು ಅಖಂಡ ದೃಷ್ಟಿಯಿರುವುದು ತೋರುತ್ತದೆ. ಬೌದ್ಧ ಮತದಲ್ಲಿ ಶ್ರದ್ಧೆ, ಬುದ್ಧನಲ್ಲಿ ಗೌರವ, ಜೈನಧರ್ಮದ ರೀತಿ-ನೀತಿಗಳನ್ನು ಈ ಕಥೆಗಳು ಪ್ರತಿಫಲಿಸುತ್ತವೆ. ಬೌದ್ಧಮತಾವಲಂಬಿಗಳ ಸಾಮಾಜಿಕ ಪದ್ಧತಿಗಳು, ಮೌಲ್ಯಸಂವೇದನೆ ತೀರ ಭಿನ್ನ: ಸಾಮಾನ್ಯ ಜನರಿಗೆ ಅರಗಿಸಿಕೊಳ್ಳುವುದೆ ಕಷ್ಟ ಎಂಬಂತೆ ತೋರುತ್ತದೆ. ಬೌದ್ಧಮತ ಒಂದು ಕಾಲದಲ್ಲಿ ಬಹುಜನರನ್ನು ಆಕರ್ಷಿಸಿದ್ದಿತು. ಕ್ರಮೇಣ ಭಾರತ ದೇಶದಿಂದ ಕಣ್ಮರೆಯಾಯಿತು. ಇದಕ್ಕೆ ಕಾರಣವೇನು? ಕಾರಣ ಒಂದಲ್ಲ, ಅನೇಕ ಮುಕ್ತಮನದಿಂದ ಇತಿಹಾಸವನ್ನು ಗಮನಿಸುವವರಿಗೆ, ರಾಜಕೀಯ ಘಟನೆಗಳಿಂದ ಆರ ಸಾಮಾಜಿಕ ಪಲ್ಲಟಗಳನ್ನು ಗುರುತಿಸುವವರಿಗೆ ಕಾರಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನೈರಾಶ್ಯಭಾವ, ಜೀವನೋತ್ಸಾಹವಿಲ್ಲದಿರುವಿಕೆ ಇವೇ ಬೌದ್ಧಮತದ ಅವನತಿಗೆ ಮುಖ್ಯ ಕಾರಣ. ಉದಾಹರಣೆಗಾಗಿ 'ವೈರಾಗ್ಯದ ಅತಿರೇಕ' ಕಥೆಯನ್ನು ನೋಡಿ. ಜನರಲ್ಲಿ ಬಾಳಿಬದುಕಬೇಕೆಂಬ ಸಹಜ ಹಂಬಲವನ್ನೇ ಬೌದ್ಧಮತ ಮುರುಟಿ ಹಾಕಿತು. ಇನ್ನು ಕ್ತಾತ್ರತೇಜವಂತೂ ಬೌದ್ಧರಲ್ಲಿ ಇರಲೇ ಇಲ್ಲ. ಎಂಟನೇ ಶತಮಾನದಿಂದ ಆರಂಭಿಸಿ ಮುಸಲ್ಮಾನರ ಆಕ್ರಮಣಗಳಾದ ನಂತರ ಬೌದ್ಧರು ಸಾರಾಸಗಟಾಗಿ ಮತಾಂತರಗೊಂಡು ಈ ದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಲು ಕಾರಣರಾದರು. ನಂತರ ಬೌದ್ಧ ವಿದ್ಯಾಕೇಂದ್ರಗಳಾದ ನಳಂದಾ ಮುಂತಾದವು ಮುಸಲ್ಮಾನರ ದಾಳಿಗೆ ಸಿಲುಕಿ ನಾಶವಾದ ಮೇಲೆ ಬೌದ್ಧ ವಿದ್ವಾಂಸರೂ ಅದೃಶ್ಯರಾದರು. ಅನೇಕರು ಟಿಬೆಟ್‌ಗೆ ಓಡಿಹೋದರು. ಸಮಾಜಜೀವನದ ಆಗುಹೋಗುಗಳನ್ನು ಪ್ರತಿಫಲಿಸುವ ಸುಂದರ ಕಥೆಗಳು ಈ ಸಂಗ್ರಹದಲ್ಲಿ ಇವೆ. 'ವಿವೇಕದಿಂದ ವ್ಯಸನ ನಿವೃತ್ತಿ' ಕಥೆಯಲ್ಲಿ ಬರುವ ಪಾತ್ರಗಳು ಎಂದೆಂದೂ ಎಲ್ಲೆಲ್ಲೂ ಕಾಣಬಹುದಾದಂಥವೆ ಅಲ್ಲವೆ? ಇಂದಿನ ಪತ್ರಿಕೆಗಳ ಕ್ರೈಂ ಪಟಗಳನ್ನು ತಿರುವಿದಾಗ ಪ್ರಿಯಕರನಿಗಾಗಿ ಪತಿಯನ್ನೆ ಪರಲೋಕಕ್ಕಟ್ಟುವ ತರುಣಿಯರು, ಉಪಪತ್ನಿಗಾಗಿ ಹೆಂಡತಿ-ಮಕ್ಕಳನ್ನು ಕೊಲ್ಲುವ ಪುರುಷಸಿಂಹರು, ಹಿಂದುಮುಂದು ನೋಡದೆ ಹಳ್ಳಕ್ಕೆ ಬಿದ್ದು ಒದ್ದಾಡುವ ಪೆದ್ದುಗಳು ಯಥೇಚ್ಛವಾಗಿ ಕಾಣಸಿಗುತ್ತಾರೆ. ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳು ಮನುಷ್ಯಸ್ವಭಾವದ ಮೂಲಗ್ರಹಿಕೆಗಳು, ಚರ್ಯೆಗಳು ಹಾಗೆಯೇ ಇರುತ್ತವೆ! ಎಂಬ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

About the Author

ಎಸ್. ಆರ್. ಲೀಲಾ
(16 January 1950)

ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಎಸ್.ಆರ್. ಲೀಲಾ ಅವರು ಜನಿಸಿದ್ದು, 1950 ಜನವರಿ 16ರಂದು ಕೋಲಾರದ ಸಂಪಂಗೆರೆಯಲ್ಲಿ ವೃತ್ತಿಯಲ್ಲಿ ಸಂಸ್ಕೃತ ಪ್ರಾಚಾರ್ಯರಾಗಿದ್ದ ಇವರು, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಸಿಂಟಿಕೇಟ್ ಸದಸ್ಯರುಮ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಆಗಿದ್ದಾರೆ. ಜಗ್ಗು ವಕುಲ ಭೂಷಣ (ಜೀವನ ಚರಿತ್ರೆ) ಹಾಗೂ ಸೌರಭ (ಲೇಖನ ಸಂಗ್ರಹ) ಇವರ ಪ್ರಮುಖ ಕೃತಿಗಳು.  ...

READ MORE

Related Books