ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹತ್ತನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೊರತಂದ ಪ್ರಾತಿನಿಧಿಕ ಕಥಾ ಸಂಕಲನ 'ನೆಲಬಾನು'. ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರ ಸಂಪಾದಕತ್ವದಲ್ಲಿ ಹೊರಬಂದಿರುವ ಈ ಕೃತಿಯು, ಜಿಲ್ಲೆಯ ಹದಿನೈದಕ್ಕೂ ಹೆಚ್ಚು ಕಥೆಗಾರರ ಕಥೆಗಳನ್ನು ಹೊತ್ತು ತಂದಿದೆ. ಮುಖ್ಯವಾಗಿ ಕನ್ನಡ ನಾಡಿನ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮೈಸೂರು ಜಿಲ್ಲೆಯ ಸಾಹಿತ್ಯ ಸಂಸ್ಕೃತಿಯು ಅಪರಿಮಿತ ವಾದುದು. ಸಾಹಿತ್ಯ ಸಂಸ್ಕೃತಿಯಷ್ಟೆ ಪರಂಪರೆಯ ವೈಭವವೂ ಹೆಚ್ಚು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಹತ್ತನೇ ಜಿಲ್ಲಾ ಸಮ್ಮೇಳನದಲ್ಲಿ ಪ್ರಥಮ ಕೃತಿಯಾಗಿ ನೆಲಬಾನು ಬಿಡುಗಡೆಗೊಂಡಿತು.
ನೆಲಬಾನು ಅಪ್ಪಟ ಹಳ್ಳಿ ಮಕ್ಕಳ ಕಥಾಸಂಕಲನ. ಒಂದು ಪ್ರದೇಶದ, ಆ ಭಾಗದ ಹಳ್ಳಿಹಳ್ಳಿಯ ಮಾತುಕತೆಗಳು, ವೈಶಿಷ್ಠ್ಯಗಳು, ನಡೆನುಡಿಗಳು ನಿಜಕ್ಕೂ ಸಾಕ್ಷಿ ಕಲ್ಲುಗಳು. ಇಂತಹ ಪಾರಂಪರಿಕ ಭಾವೈಕ್ಯತೆಯ ನೈಜ ಚಿತ್ರಣಗಳನ್ನು ಕಥೆಗಳಲ್ಲಿ ಕಟ್ಟುವುದು. ಇದರಿಂದ, ಮುಂದಿನ ಪೀಳಿಗೆಗೆ ಸಾಹಿತ್ಯ ಮುಖೇನ ಹಿಡಿದಿಟ್ಟುಕೊಡುವ ಕೆಲಸಗಳಾದಂತೆ. ಟಿ. ಲೋಕೇಶ್ (ತಾಯಿ), ಎಸ್. ಮಂಗಳಾಸತ್ಯನ್ (ವಿಧೀನಕ್ಕಾಗ), ಪೂರೀಗಾಲಿ ಮರಡೇಶ ಮೂರ್ತಿ (ಪ್ರೀತಿಯ ಹಣತೆ), ಬಿ. ಆರ್. ನಾಗರತ್ನ (ಕಾಲಾಯ ತಸ್ಮೈನಮಃ), ಬಲ್ಲೇನಹಳ್ಳಿ ಮಂಜುನಾಥ್ (ಸುಭದ್ರೆಯ ಪರಿಣಯವೋ, ವಸ್ತ್ರಾಪಹರಣ ಎಂಬ ನಾಟಕವೋ ), ಉಮಾ ಸುಶಿಪ್ರ (ನಾಯಿ ಕಮಲ ), ಹುಣಸೂರು ಮಧು ಪ್ರಸಾದ್ (ಹೆಣ ಭಾರ ), ವಾಣಿ ನಾಗರಾಜ್ (ಮನ್ನಿಸಿಬಿಡು ಮಗಳೇ ), ಬಿ. ಎಲ್. ಪ್ರಭು ಅಪರಿಚಿತರೊಂದಿಗಿನ ಆತ್ಮೀಯತೆ ), ಬಿ. ಸುಜಾತ (ಆದರ್ಶ ), ಸುಚೇತಾ ಗೌತಮ್ (ಎತ್ತ ಸಾಗಿದೆ ಈ ಪಯಣ ), ತುಳಸಿ ವಿಜಯ ಕುಮಾರಿ (ಮತ್ತೆ ಬಂದಿತು ಹುಣ್ಣಿಮೆ ), ಬಿ. ಎಂ. ಮಹಾದೇವ ಮೂರ್ತಿ (ಪಾಶ ), ಪೂ. ಮ. ಮಹೇಶ್ ಚಂದ್ರ (ಆ ಹುಡುಗಿ ), ಹಾಗೂ ಎಸ್. ಎಸ್. ಶ್ರೀಕಂಠಮೂರ್ತಿ (ಮನಸ್ಸು )-ಈ ಎಲ್ಲ ಕಥೆಗಳನ್ನು ‘ನೆಲಬಾನು’ ಒಳಗೊಂಡಿದೆ.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE