“ಪರಸ್ಪರ ಮತ್ತಿತರ ಕತೆಗಳು” ಮುರ್ತುಜಾಬೇಗಂ ಕೊಡಗಲಿ ಅವರ ಕಥಾ ಸಂಕಲನವಾಗಿದೆ. ವಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ ಈ ಪ್ರಜ್ಞೆ ಸಾಮಾಜಿಕ ಭಿನ್ನತೆಗಳನ್ನು ಒಟ್ಟಿಗೆ ಬೆಸೆಯುವ ಮಂತ್ರ ಎನ್ನುವದು ಲೇಖಕಿಯ ಅಭಿಮತವಾಗಿದೆ. ಸಮಾಜದಲ್ಲಿ ಬದುಕುತ್ತಿರುವ ಎಲ್ಲ ಸಮುದಾಯದ ಪಾತ್ರಗಳೂ ಬೇರೆ ಸಮುದಾಯದವರ ನೋವನ್ನು ತಮ್ಮದೇ ನೋವು ಎಂದು ಭಾವಿಸುತ್ತವೆ. ಹೀಗಾಗಿ ಕಥೆಗಳಲ್ಲಿ ಬರುವ ಅಸಹಾಯಕ ಪಾತ್ರಗಳನ್ನು ಹಿಡಿದು. ಎಲ್ಲ ಪಾತ್ರಗಳಿಗೆ ಒಂಟಿತನ ಕಾಡುವುದಿಲ್ಲ. ಹೀಗೆ ಈ ಪುಸ್ತಕವು ಓದುಗರಿಗೆ ಮನಮುಟ್ಟುವಂತಿದೆ.
ಮುರ್ತುಜಾಬೇಗಂ ಕೊಡಗಲಿ ಅವರು ಇಳಕಲ್ಲು ಮೂಲದವರು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಹಿರೇಬಾದವಾಡಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಪುಸ್ತಕಗಳು: ಮೊನ್ನೆ ಬಂದ ಮಳೆಗೆ, ಭಾವಬದುಕು, ರಾಬಿಯಾ-ಬಿರುಗಾಳಿಯ ಹಾಡು ಪ್ರಶಸ್ತಿಗಳು: ದ ರಾ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗ ಕನ್ನಡ ಸಂಘದಿಂದ ಪಿ ಲಂಕೇಶ್ ಪ್ರಶಸ್ತಿ, ಜಗಜ್ಯೋತಿ ಕಲಾವ್ರಂದ ಮುಂಬೈನಿಂದ ರಾಷ್ಟ್ರಮಟ್ಟದ ಮಹಿಳೆಯರಿಗೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪಿ ಸುಶೀಲಾ ಸ್ಮರಣಾರ್ಥ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಚುಟುಕು ಪ್ರಶಸ್ತಿ, ಇಳಕಲ್ಲ ಶ್ರೀಮಠದಿಂದ ಬಸವಭೂಷಣ ಪ್ರಶಸ್ತಿ, ಜಿಲ್ಲೆಯ ಕ್ರಿಯಾಶೀಲ ಲೇಖಕಿ ಪ್ರಶಸ್ತಿ, ಅಡ್ವೈಜರ್ ...
READ MORE