ನಾಟಿ ಓಟ

Author : ಕವಿತಾ ರೈ

Pages 116

₹ 90.00




Year of Publication: 2017
Published by: ಸಂವಹನ

Synopsys

ತಮ್ಮದೇ ಆದ ಬರೆವಣಿಗೆಯ ಶೈಲಿಯಿಂದ ಕನ್ನಡ ಸಾಹಿತ್ಯ ರಂಗದಲ್ಲಿ ಮೈಲಿಗಲ್ಲು ನೆಟ್ಟ ಕೆಲವು ಸಾಹಿತಿಗಳ ಸಾಲಿನಲ್ಲಿ ಡಾ. ಕವಿತ ರೈ ಅವರು ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಲೇಖಕರಾಗಿ, ಕವಯಿತ್ರಿ ಆಗಿ, ನಾಟಕಕಾರ್ತಿಯಾಗಿ ತಮ್ಮದೇ ಛಾಪು ಮೂಡಿಸಿರುವ ಕವಿತಾ ಅವರ ಲೇಖನಿಯಿಂದ ಬರೆಯಲ್ಪಟ್ಟ ಮತ್ತೊಂದು ಕೃತಿ ನಾಟಿ ಓಟ – ಕೊಡಗಿನ ಕಥೆಗಳು. 

ಕೊಡಗಿನ ಸಾಂಸ್ಕೃತಿಕ ಜೀವನದ ದರ್ಶನವನ್ನು ಓದುಗರಿಗೆ ಮಾಡಿಸುವ ಅಪರೂಪದ ಪುಸ್ತಕವಿದು. ಕೊಡಗಿನ ಪ್ರದೇಶ, ಆಚಾರ ವಿಚಾರಗಳು, ಭಾಷಾ ನೀತಿಗಳು ಹಾಗೂ ಕೊಡಗಿಗೆ ಸಂಬಂಧಪಟ್ಟ ಇತರ ಸೂಕ್ಷ್ಮ ವಿಷಯಗಳ ಕುರಿತು ಸ್ಥೂಲವಾದ ವಿವರಣೆಯನ್ನು ಈ ಪುಸ್ತಕದಲ್ಲಿ ಕಾಣಬಹುದು. ಐನ್ ಮನೆ, ಗೌರು ಕಾಯುತ್ತಾಳೆ, ಡೈಸಿ ಎಂಬ ನದಿ ಹೀಗೆ ಹಲವು ಕಥೆಗಳು ಓದುಗರ ಮನಸ್ಸನ್ನು ಭಾವುಕರನ್ನಾಗಿ ಮಾಡುತ್ತವೆ.

ಜೀವಂತಿಕೆಯ ಭಾವವನ್ನು ತೆರೆದು ತೋರುವ ಸಂದೇಶವನ್ನು ನೀಡುವ ಪುಸ್ತಕವು, ಲೇಖಕಿಯ ಜೀವನದ ಅನುಭವಗಳ ಕುರಿತು ಕೂಡ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿನ ಪಾತ್ರಗಳಿಎ ಅರ್ಥಪೂರ್ಣವಾಗಿ ಜೀವ ತುಂಬುವ ಕಾರ್ಯವನ್ನು ಲೇಖಕರು ಈ ಪುಸ್ತಕದಲ್ಲಿ ಮಾಡಿದ್ದಾರೆ.

About the Author

ಕವಿತಾ ರೈ
(15 October 1974)

ಮಹಿಳಾ ಲೇಖಕಿ ಕವಿತಾ ರೈ ಅವರು ಮೂಲತಃ ಮಡಿಕೇರಿಯವರು. ತಾಯಿ ಬಿ.ಎಲ್.ರಾಧಾ, ತಂದೆ ಬಿ.ಎಸ್.ರಂಗನಾಥ ರೈ. ವೃತ್ತಿಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸಾಹಿತ್ಯದೆಡೆಗಿನ ಒಲವು ಬಾಲ್ಯದಿಂದಲೂ ಅಪಾರವಾಗಿತ್ತು.   ಕನ್ನಡ ಸಾಹಿತ್ಯದಲ್ಲಿ ಇವರ ಕೊಡುಗೆಗೆ ದಿ.ವಿ.ಎಮ್. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ ಒಲಿದುಬಂದಿದೆ. ಇವರು ಬರೆದಿರುವ ಕೃತಿಗಳೆಂದರೆ ಹಕ್ಕಿ ಹರಿವ ನೀರು, ನೀರ ತೇರು (ಕವನ ಸಂಕಲನ) , ಮಹಿಳೆ ಅಸ್ತಿತ್ವದ ಸಂಕಥನ, ಅರಿವಿನ ನಡೆ, ವಿವಾಹ ಮತ್ತು ಕುಟುಂಬ (ವೈಚಾರಿಕ) ಮುಂತಾದವು. ...

READ MORE

Related Books