`ತಪ್ದಂಡ’ ಬಸವರಾಜ ಸಾದರ ಅವರ ಕಥಾಸಂಕಲನವಾಗಿದೆ. ಜೀವನ ಪ್ರೀತಿಗಳನ್ನು ನೆನಪಿಸುತ್ತ ಸಾಗುವ ಕಥೆಗಳು. ಧನದಾಹಿಯಾದ ವರ್ಗಗಳಿಗೆ ಬಲಿಯಾಗುತ್ತ ಜೀವಚ್ಛವದಂತೆ ಬಾಳುವ ಸಮಾಜದ ಇನ್ನೊಂದು ವರ್ಗದವರ ನೋವಿನ ಎಳೆ-ಎಳೆ ಬಿಡಿಸಿ ಗುರುತಿಸುವ ಚಿತ್ರಣವೇ ಈ ಕಥಾಸಂಕಲನವಾಗಿದೆ.
ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...
READ MOREಹೊಸತು- 2003- ಮಾರ್ಚ್
ಇಂದಿನ ಉನ್ನತ ಶಿಕ್ಷಣದಿಂದ ತಾನು ನಾಗರಿಕನಾಗಿದ್ದೇನೆಂದು ಭ್ರಮಿಸಿ ಬೀಗುತ್ತಿರುವ ಮನುಷ್ಯನಿಗೆ ಆತ ಮರೆತಿರಬಹುದಾದ ಉನ್ನತ ಮೌಲ್ಯ -ಜೀವನ ಪ್ರೀತಿಗಳನ್ನು ನೆನಪಿಸುತ್ತ ಸಾಗುವ ಕಥೆಗಳು. ಧನದಾಹಿಯಾದ ವರ್ಗಗಳಿಗೆ ಬಲಿಯಾಗುತ್ತ ಜೀವಚ್ಛವದಂತೆ ಬಾಳುವ ಸಮಾಜದ ಇನ್ನೊಂದು ವರ್ಗದವರ ನೋವಿನ ಎಳೆ-ಎಳೆ ಬಿಡಿಸಿ ಗುರುತಿಸುವ ಚಿತ್ರಣ ಇದಾಗಿದೆ. ಇಲ್ಲಿನ 'ಬಿಕ್ರ', 'ತಪ್ಪಂಡ'ದಂತಹ ಕಥೆಗಳು ಮುಗ್ಧ ಜನರಿಂದ ಎಲ್ಲವನ್ನೂ ದೋಚುವ ಗಣ್ಯವ್ಯಕ್ತಿಗಳ ಬಗ್ಗೆ ಎಚ್ಚರಿಕೆ ನೀಡುತ್ತವೆ.