ಅಡಗೂಲಜ್ಜಿಯ ಕಥೆಗಳು ಮಕ್ಕಳ ಕಥಾ ಪುಸ್ತಕವನ್ನು ಲೇಖಕಿ ಪಾರ್ವತಮ್ಮ ಮಹಾಲಿಂಗಶೆಟ್ಟಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಕ್ಕಳಿಗೆ ಪೂರಕವಾದ ಕಥಗಳನ್ನು ಸರಳ ಕನ್ನಡ ಭಾಷೆಯಲ್ಲಿ ರಚಿಸಲಾಗಿದೆ. ಇಲ್ಲಿ ವಿವಿಧ ನೀತಿಗಳ ಮುಲಕ ಕಥೆಗಳನ್ಮು ರಚಿಸಲಾಗಿದ್ದು, ಚಿತ್ರಗಳ ಮುಖೇನ ವರ್ಣಿಸಲಾಗಿದೆ.
ಹಾಸ್ಯ ಬರಹಗಾರ್ತಿ, ಲೇಖಕಿ ಪಾರ್ವತಮ್ಮ ಮಹಲಿಂಗಶೆಟ್ಟಿ ಅವರು 1928 ಅಕ್ಟೋಬರ್ 24 ರಂದು ಚಿತ್ರದುರ್ಗದಲ್ಲಿ ಜನಿಸಿದರು. ’ನರಿ, ಹಲ್ಲು ಕಂಡೀತು ಜೋಕೆ! ಭಾಗ 1, 2, ಅವರ ಕೃತಿ. ’ಹಿಂದೂ ಮಗುವೆ ನಿನಗಾಗಿ ಒಂದು ಪುಟ್ಟ ಪುಸ್ತಕ ಮತ್ತು ’ಹೆಣ್ಣಿನ ದೃಷ್ಟಿಯಲ್ಲಿ ಈ ಶತಮಾನ” ಎಂಬ ಆತ್ಮಕಥೆಯನ್ನು ಬರೆದಿದ್ಧಾರೆ. ’ಹಳೆಯ ಕಥೆಗಳಿಗೆ ಹೊಸಬಲ, ಅಡಗೂಲಜ್ಜಿಯ ಕಥೆಗಳು, ಮಕ್ಕಳ ಆರೋಗ್ಯ, ಸಂರಕ್ಷಣೆ ಮತ್ತು ನಡವಳಿಕೆ, ಕುಟುಂಬದಲ್ಲಿ ಹೊಂದಾಣಿಕೆ ಮತ್ತು ಮಕ್ಕಳು’ ಅವರ ಸಂಪಾದಿತ ಕೃತಿಗಳು. ಹೆಣ್ಣಿನ ದೃಷ್ಟಿಯಲ್ಲಿ ಈ ಶತಮಾನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. ...
READ MORE