ವೈಜ್ಞಾನಿಕ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು ಜನಸಾಮನ್ಯರಿಗೆ ತಲುಪುವಂತಾಗಲು ಹ.ಶಿ.ಭೈರನಟ್ಟಿ ಅವರು ಹೊಸ ಆವಿಷ್ಕಾರಗಳನ್ನು ಕಥೆಯ ರೂಪದಲ್ಲಿ ವಿವರಿಸಲು ಯತ್ನಿಸಿದ್ದಾರೆ. ಇಂದಿನದು ನಾಳೆಗೆಲ್ಲ ಔಟ್ ಡೇಟೆಡ್ ಅನ್ನಿಸುತ್ತಿದೆ. ಆದರೆ, ಇದೆಲ್ಲವನ್ನೂ ಗ್ರಹಿಸುವಲ್ಲಿ ವಿಜ್ಞಾನದ ಬರವಣಿಗೆಗಳು ಸಾಲವು. ಕಥೆಗಳಿಗೆ ವೈಜ್ಞಾನಿಕ ರೂಪ ನೀಡಿರುವುದು ಈ ಕೃತಿಯ ವಿಶೇಷತೆ.
ವೈಜ್ಞಾನಿಕ ಕಾದಂಬರಿ ಪ್ರಕಟಿಸಿರುವ ಹನುಮಂತ ಶಿ. ಭೈರನಟ್ಟಿ ಅವರು ಕನ್ನಡದ ಪ್ರಮುಖ ಚಿಂತಕ-ಲೇಖಕರಲ್ಲಿ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಕುಲಗೋಡ ಗ್ರಾಮದವರು. 1950ರ ಮೇ 2ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ಜೀವ ವಿಮಾ ನಿಗಮ (ಎಲ್.ಐ.ಸಿ.)ದಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಹಲವು ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಿದ್ದರು. ಅವರು 2019ರ ಮೇ 5ರಂದು ಧಾರವಾಡದಲ್ಲಿ ನಿಧನರಾದರು. ...
READ MORE