ಆಲೋಚನೆ

Author : ಚಂದ್ರು ಓಬಯ್ಯ

Pages 145

₹ 100.00




Year of Publication: 2012
Published by: ಕ್ರಿಯೇಟಿವ್‌ ಪಬ್ಲಿಕೇಶನ್‌
Address: #1/1, 1st 'A' ಕ್ರಾಸ್‌ ಬ್ಯಾಟರಾಯನಪುರ, ಬೆಂಗಳೂರು
Phone: 9986621467

Synopsys

`ಆಲೋಚನೆ' ಚಂದ್ರು ಓಬಯ್ಯನವರ ಸಣ್ಣಕಥಾಸಂಕಲನವಾಗಿದೆ. ಇಲ್ಲಿ ಸಣ್ಣ ಸಣ್ಣಾದಾಗಿ ತಿದ್ದಿ ತೀಡಿದ ಹಲವು ಬದುಕುಗಳ ಚಿತ್ರಣಗಳಿವೆ. ನಾವು ನೀವು ಚರ್ಚಿಸಬೇಕಾದ ವಿಚಾರಗಳಿವೆ. ನಮ್ಮ ನಿಮ್ಮನ್ನ ಆಲೋಚನೆಗೆ ದೂಡುವ ಅದ್ಭುತ, ಅಮೋಘವಾದಂತ ಕಥೆಗಳಿವೆ. ಇದೇ ಕಾರಣಕ್ಕೆ ಆಲೋಚನೆ ಎಂಬ ಹೆಸರನ್ನ ಈ ಸಣ್ಣ ಕಥೆಗಳಿಗಿಡಲಾಗಿದೆ. ಅಲೆದಾಟ ಎಂಬ ಪ್ರಾರಂಭದ ಸಣ್ಣ ಕಥೆಯಲ್ಲಿ ರಾಜೇಶ್ ಎಂಬುವ ಯುವಕ ಪಟ್ಟಣಕ್ಕೆ ಬಂದು ಅಲೆದಾಡುವ ಮನಕಲುಕುವ ವಿತ್ರಣವಿದೆ. ಪಟ್ಟಣದ ದಟ್ಟದರಿದ್ರ ಜೀವನ ಶೈಲಿಯ ಮಜಲುಗಳಿವೆ. ಜೊತೆಗೆ ಪಟ್ಟಣವೆಂಬ ಸುಂಧರ ಜಗತ್ತಿನ ಕರಾಳ ಮುಖದ ಅನಾವರಣವಿದೆ. ಇನ್ನೂ ಈ ಕಥೆಯಲ್ಲಿ ಬರುವ ಒಂದು ಪುಟ್ಟ ಕವನ ಓದುವುದಾರೆ... “ಸಿಗದ ಮುತ್ತಿಗೆ ಕೈಚಾಚ ಬೇಡ ಸಿಗದ ಬೆಣ್ಣೆಗೆ ನಾಲಿಗೆ ಸವರ ಬೇಡ ಸಿಗದ ಹಣ್ಣಿಗೆ ಕಲ್ಲೊಡೆಯ ಬೇಡ ಸಿಕ್ಕಿರುವ ಬೆಲ್ಲದಚ್ಚನ್ನ ನೀ ರುಚಿನೋಡಲು ಮರೆಯ ಬೇಡ" ಹೀಗೆ ಜೀವನಕ್ಕೆ ಬೇಕಾದ ಸೂಕ್ಷತೆಗೂ ಇಲ್ಲಿ ನಮಗೆ ಸಿಗುತ್ತವೆ.. ಅಲೆದಾಟ ಏಷ್ಟೋ ಮನಸ್ಸುಗಳಿಗೆ ಮಾರ್ಗ ಸೂಚಿಯಾಗುತ್ತದೆ. ಇದೇ ರೀತಿ ಲೇಖಕರು ಸುಮಾರು ಇಪ್ಪತ್ತ ಒಂದು ಸಣ್ಣ ಕಥೆಗಳನ್ನ ಲೇಖಕರು ಈ ಪುಸ್ತಕದಲ್ಲಿ ಬರೆದಿದ್ದಾರೆ.

About the Author

ಚಂದ್ರು ಓಬಯ್ಯ
(18 July 1986)

ಲೇಖಕ ಚಂದ್ರು ಓಬಯ್ಯ ಅವರ ಪೂರ್ಣ ಹೆಸರು ಚಂದ್ರಶೇಖರ್ ಓಬಯ್ಯ. ಹುಟ್ಟಿದ್ದು ತುಮಕೂರು ಜಿಲ್ಲೆ ಪಾವಗಡ ತಾಲೂಕು ಕೆಂಚಮ್ಮನಹಳ್ಳಿಯ ಗೊಲ್ಲರಹಟ್ಟಿಯಲ್ಲಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನ ತನ್ನೂರಿನ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ಶಿಕ್ಷಕ ತರಬೇತಿ ಶಿಕ್ಷಣವನ್ನ ಬೆಂಗಳೂರಿನ ಕೆಂಗೇರಿ ಬಳಿ ಇರುವ ಬಂಡೆ ಮಠದ ಸಂಸ್ಥೆಯಲ್ಲಿ ಪಡೆಯುತ್ತಾರೆ. ಸಂಗೀತದ ಮೇಲೆ ಅಪಾರ ಪ್ರೀತಿ ಇದ್ದ ಕಾರಣ ಆ ಕ್ಷೇತ್ರದಲ್ಲಿ ಏನಾದರೊಂದು ಸಾಧಿಸಬೇಕು ಎನ್ನುವ ಛಲ ಇವರಲ್ಲಿರುತ್ತದೆ. ಇವರ ತಂದೆ ನಾಟಕ ಹೇಳಿಕೊಡುವ ಸಂಗೀತ ಶಿಕ್ಷಕರಾಗಿದ್ದ ಕಾರಣ ಸಂಗೀತ ಇವರಿಗೆ ರಕ್ತಗತವಾಗೇ ಬಂದಿತ್ತು. ಅಷ್ಟೇಅಲ್ಲದೆ ಕವನಗಳನ್ನ ಬರೆಯಲು ಪ್ರಾರಂಭಿಸುತ್ತಾರೆ. ತದ ನಂತರ ಎರಡು ...

READ MORE

Related Books