‘ಗುರ್ಬಾಣಕ್ಕಿ’ ಕೃತಿಯು ರಾಜೀವ ನಾರಾಯಣ ನಾಯಕ ಅವರ ಕತಾಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ದಿವಾಕರ್ ಅವರು, `ಲೇಖಕ ಕತೆಗಳಲ್ಲಿ ನಗರದಲ್ಲಿದ್ದೂ ಹಳ್ಳಿಯ ಬಾಲ್ಯ, ಯೌವನಗಳ ಸೆಳೆತದಿಂದ ಪಾರಾಗದ ಮುಗ್ಧ ಹುಡುಗನೊಬ್ಬ ಸ್ಥಾಯಿಯಾಗಿದ್ದಾನೆ ಎಂದು ವಿವರಿಸುತ್ತಾನೆ. ಆ ಪಾತ್ರ ಅಪ್ರಜ್ಞಾಪೂರ್ವಕವಾಗಿ ಹಳ್ಳಿ-ನಗರಗಳ ಅನುಭವವನ್ನು ತಾಳೆ ಹಾಕಿ ನೋಡಬಲ್ಲುದು ಅಥವಾ ಸಂದರ್ಭವೊಂದು ಚಿಮ್ಮಿಸುವ ಭೂತಕಾಲದೊಳಗಿಂದಲೇ ಓದುಗನಿಗೆ ವಿವರಗಳನ್ನು ಒದಗಿಸಬಲ್ಲುದು. ಝಕ್ಕುಂ ಜಂಗುಂ ಜೋಹೋಚೋ ಎಂಬ ಮಜಾ ಶೀರ್ಷಿಕೆಯುಳ್ಳ ಕತೆಯ ಈ ಪ್ಯಾಸೇಜ್ ಓದಿ:`ಹೊತ್ತು ಮಾತ್ರ ಅಡ್ಡಾದದ್ದೇ ಜಡಿ ಮಳೆ ಹುಯ್ದು ಹೋದೊಡನೆ ಉಕ್ಕುವ ಒರತೆಯಂತೆ ಎಲ್ಲ ದಿಕ್ಕುಗಳಿಂದಲೂ ಜನ ಸಣಸ್ಥ ದ್ಯಾವರ ಬಯಲಿಗೆ ಇಳಿಯತೊಡಗಿದರು. ಊರು ಕೇರಿಗಳಿಂದ, ಕೊಪ್ಪ ಕಾಡುಗಳಿಂದ ಗುಡ್ಡದ ಮರುಕಲಿಳಿದು ವರ್ಣಮೇಳಕ್ಕೆ ಬಂದವರಂತೆ ರಂಗುರಂಗಿನ ಬಟ್ಟೆ ಧರಿಸಿ, ಕಾಲುದಾರಿ ಹಿಡಿದು, ಮಕ್ಕಿ ಗದ್ದೆ ಹಾಳೆ ದಾಟಿ ಗುಡಿಯ ಸುತ್ತ ಕೂಡಿಕೊಂಡರು. ಅತ್ತ ಕರಿಬೀರ ಸಾಮಿಯ ಪೂಜೆ ಮುಗಿಸಿ ಹೊರಟ ಸುಗ್ಗಿ ಮಕ್ಕಳು ಗುಡ್ಡದ ದಾರಿಯುದ್ದ ಸಾಲಾಗಿ ಇಳಿದು ಬರುವಾಗ ಬಿಸಿಲಿಗೆ ತೂಗುವ ಗೊಂಡೆಗಳ ಚಿನ್ನದ ಮಿಂಚು ಝಗ್ಗನೆ ಎಲ್ಲರ ಕಣ್ತುಂಬಿ, ಜನಸ್ತೋಮ `ಹೋಯ್‘ ಎಂದು ಉದ್ಗರಿಸಿತು…’ ಎಂದು ವಿಶ್ಲೇಷಿಸಿದ್ದಾರೆ.
ಲೇಖಕ ರಾಜೀವ ನಾರಾಯಣ ನಾಯಕ ಅವರು ಮುಂಬೈ ಕನ್ನಡಿಗ. ಬರವಣಿಗೆಯ ಮೇಲೆ ಹಿಂದಿನಿಂದಲೂ ಆಸಕ್ತಿ ಬೆಳೆಸಿಕೊಂಡು ಬಂದಿದ್ದು, ಇವರು ರಚಿಸಿದ ಕತೆಗಳು ಹಲವಾರು ಕಥಾಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅವೆಲ್ಲವನ್ನೂ ಸೇರಿಸಿ ʻಗುರ್ಬಾಣಕ್ಕಿʼ ಮತ್ತು ʻಲಾಸ್ಟ್ ಲೋಕಲ್ ಲೋಸ್ಟ್ ಲವ್ʼ ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಸಾಹಿತ್ಯದ ಜೊತೆ ರಂಗಭೂಮಿ ಇವರ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ. ...
READ MORE