ಗುಪ್ತಗಾಮಿನಿ

Author : ಸವಿತಾ ಶ್ರೀನಿವಾಸ್

Pages 144

₹ 150.00




Year of Publication: 2022
Published by: ಅನುಸಂಶ್ರೀ ಫೌಂಡೇಶನ್
Address: ಬೆಂಗಳೂರು

Synopsys

‘ಗುಪ್ತಗಾಮಿನಿ’ ಕೃತಿಯು ಸವಿತಾ ಶ್ರೀನಿವಾಸ್ ಅವರ ವೈಜ್ಞಾನಿಕ ಕಥೆಗಳನ್ನು ಒಳಗೊಂಡ ಸಂಕಲನವಾಗಿದೆ. ಕೃತಿಯು 2013ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡಿದ್ದು, ಪ್ರಸ್ತುತ ಎರಡನೇ ಬಾರಿಗೆ ಮುದ್ರಣಗೊಳ್ಳುತ್ತಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಇದರಲ್ಲಿನ ಕಥೆಗಳು ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಕಲ್ಪನಾ ಲೋಕದಲ್ಲಿನ ವಿಚಾರಗಳು ಹಾಗೂ ಪ್ರವೃತ್ತಿಗಳು ಭವಿಷ್ಯದಲ್ಲಿ ನಿಜವಾಗುವ ಸಾಧ್ಯತೆಯನ್ನು ತೋರಿಸುತ್ತದೆ. ವಿವಿಧ ಕ್ಷೇತ್ರಗಳಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಿರುವ ತಂತ್ರಜ್ಞಾನದಿಂದಾಗಿ ಮಾನವನ ಜೀವನ ಅತ್ಯಧಿಕ ವೇಗವಾಗಿ ಪರಿವರ್ತನೆಗೊಳ್ಳುತ್ತಿರುವುದರ ಹಿನ್ನೆಲೆಯಲ್ಲಿ ಈ ಸಂಕಲನದಲ್ಲಿನ ಕಥೆಗಳು ಇದರ ಸಾಧ್ಯತೆಗಳನ್ನು ಬಿಂಬಿಸುತ್ತವೆ.

About the Author

ಸವಿತಾ ಶ್ರೀನಿವಾಸ್

ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು.  ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...

READ MORE

Related Books