ಮುಂಗಾರಿನ ಕರೆ

Author : ಗಿರಿಮನೆ ಶ್ಯಾಮರಾವ್

Pages 224

₹ 160.00




Year of Publication: 2018
Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ

Synopsys

ಮಲೆನಾಡಿನ ಹಚ್ಚ ಹಸುರಾದ ಬೆಟ್ಟಗುಡ್ಡಗಳು ನದಿ-ತೊರೆಗಳು ಪ್ರವಾಸಿಗರನ್ನು ಅಕರ್ಷಿಸುತ್ತದೆ.ಇಲ್ಲಿನ ಕಾಫಿ ತೋಟಗಳು ಪ್ರಸಿದ್ದವಾಗಿದೆ.ಇಲ್ಲಿನ ಜನರ ಭಾಷೆ,ಆಚಾರ ಸಂಸ್ಕೃತಿಗಳನ್ನು ಕಥೆಗಳನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.ಇಲ್ಲಿನ ಕಾಫಿ ತೋಟಗಳ ಕಷ್ಟನಷ್ಟಗಳು, ಬದುಕು- ಬವಣೆ, ಮಳೆಗಾಲ ಸೃಷ್ಟಿಸುವ ತಲ್ಲಣ ಸುಂದರವಾಗಿ ಲೇಖಕರು ವಿವರಸಿದ್ದಾರೆ.ವಿಚಾರವಂತ ಮಲೆನಾಡಿನ ಯುವತಿ ಕ್ಲಿಷ್ಟ ಸನ್ನಿವೇಶದಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಕಥೆಯಲ್ಲಿ ವಿವರಿಸಲಾಗಿದೆ.ಹೀಗೆ ಹಲವು ಕಥೆಗಳ ಸಂಗ್ರಹ ಈ ಕೃತಿಯಲ್ಲಿದೆ.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books