ಗುಡುಸಾಬನೂ... ಗೂಡಂಗಡಿಯೂ

Author : ಎಸ್‌.ಆರ್‌.ರಾವಳ

Pages 128

₹ 90.00




Year of Publication: 2014
Published by: ಸಿದ್ದಲಿಂಗೇಶ್ವರ ಬುಕ್‌ ಡಿಪೋ ಪ್ರಕಾಶನ
Address: ಮುಖ್ಯ ಬೀದಿ ಗುಲ್ಬರ್ಗ 585101

Synopsys

'ಗುಡುಸಾಬನೂ ಗೂಡಂಗಡಿಯೂ' ಎಂಟು ಕಥೆಗಳನ್ನೊಳಗೊಂಡ ಸಂಕಲನ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ರಚನೆಗೊಂಡ ಇಲ್ಲಿನ ಕಥೆಗಳು ಅತ್ಯಂತ ನೇರ ಮತ್ತು ಸರಳ ನಿರೂಪಣೆ ಶೈಲಿಯನ್ನು ಒಳಗೊಂಡಿವೆ. ಸಾಮಾನ್ಯ ಜನರ, ಹಳ್ಳಿಗಾಡಿನ ಬಡ ಬಗ್ಗರ ನಿತ್ಯ ಬದುಕೇ ಇಲ್ಲಿನ ಕಥೆಗಳ ವಸ್ತುವಾಗಿದೆ. ಕಥೆಗಾರರು ತಮ್ಮ ಸುತ್ತಲಿನ ಪರಿಸರದಲ್ಲಿ ನಡೆಯುವ ಅನೀತಿಯುತ ಕೆಲಸ, ಭ್ರಷ್ಟಾಚಾರ, ದೌರ್ಜನ್ಯ, ಶೋಷಣೆ, ಡಂಭಾಚಾರ ಇವೇ ಮುಂತಾದ ವಿಷಯಗಳನ್ನು ಒಳಗೊಂಡು ಸಹಜವಾದ ರೀತಿಯಲ್ಲಿ ನಿರೂಪಣೆಗೊಂಡಿವೆ. ಯಾವುದೇ ಕಾಲ್ಪನಿಕ, ಕೃತಕ, ವಿಷಯಗಳು ಇಲ್ಲಿನ ಕಥೆಗಳಲ್ಲಿ ಎಡಪಡೆದಿಲ್ಲ.

About the Author

ಎಸ್‌.ಆರ್‌.ರಾವಳ
(01 July 1958)

ಎಸ್‌.ಆರ್‌.ರಾವಳ ಅವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ 1958, ಜುಲೈ 1 ರಂದು ಜನನ. ನಾಥಪಂಥ ಸಮೂದಾಯದ ನೇಕಾರಿಕೆ ಮತ್ತು ಕೃಷಿ ಪರಿಸರ ಹೊಂದಿದ ಕೌಟುಂಬಿಕ ಹಿನ್ನೆಲೆಯುಳ್ಳವರಾಗಿದ್ದು ಅಥರ್ಗಾದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1 ರಿಂದ 7ನೇ ತರಗತಿ ಮತ್ತು ಆರ್, ಎಮ್. ಬಿರಾದಾರ ಹೈಸ್ಕೂಲಿನಲ್ಲಿ 8 ರಿಂದ 10ನೇ ತರಗತಿವರೆಗೆ ಶಿಕ್ಷಣ ಪೂರೈಸಿದರು. ಬನಹಟ್ಟಿಯ (ಈಗಿನ ಜಿಲ್ಲೆ ಬಾಗಲಕೋಟ) ಎಸ್. ಆರ್. ಎ. ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಜೆ.ಎಸ್‌.ಎಸ್‌. ಕಾಲೇಜ ಆಫ್ ಕಾಮರ್ಸ್‌ ಬನಹಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ...

READ MORE

Related Books